ಬೆಂಗಳೂರು: ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ ಗೃಹ ಇಲಾಖೆಯಡಿಯ ಹಲವು ಹುದ್ದೆಗಳಿಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅವುಗಳನ್ನು ಹೊರತುಪಡಿಸಿ ಪೊಲೀಸ್ ಇಲಾಖೆಯ 4115 ಕಾನ್ಸ್ಟೇಬಲ್, ಪಿಎಸ್ಐ ಹುದ್ದೆಗೆ ಅನುಮೋದನೆ ನೀಡಿದೆ.
ದೀಪಾವಳಿಗೆ Samsung ಫೋನ್ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ! ಇಲ್ಲಿದೆ ಬೆಸ್ಟ್ ಆಫರ್!
ಹೌದು ಬರೋಬರಿ 3500 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿವೆ, ಹಾಗೂ 615 ಪೊಲೀಸ್ ಸಬ್ಇನ್ಸ್ಪೆಕ್ಟರ್ ಹುದ್ದೆಗಳಿವೆ. 2023-24ನೇ ಸಾಲಿನ ಹಾಗೂ 2022-23 ನೇ ಸಾಲಿನಲ್ಲಿ ಭರ್ತಿ ಮಾಡಬೇಕಿದ್ದ, ಪ್ರಸ್ತಾವನೆ ಸಲ್ಲಿಸಲಾಗಿರುವ ಹುದ್ದೆಗಳು ಇವಾಗಿವೆ. ಯಾವೆಲ್ಲ ಹುದ್ದೆಗಳು ಎಷ್ಟಿವೆ? ಯಾವ ಹುದ್ದೆಗಳಿಗೆ ಅಧಿಸೂಚನೆ ಶೀಘ್ರದಲ್ಲೇ ಬಿಡುಗಡೆ ಆಗಬೇಕಿದೆ ಎಂಬುದರ ಡೀಟೇಲ್ಸ್ ಇಲ್ಲಿದೆ ನೋಡಿ.
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಸಿಎಆರ್/ಡಿಎಆರ್): 2000
ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಆರ್ಪಿ): 1500
ಪೊಲೀಸ್ ಸಬ್ಇನ್ಸ್ಪೆಕ್ಟರ್ (2022-23): 300
ಪೊಲೀಸ್ ಸಬ್ಇನ್ಸ್ಪೆಕ್ಟರ್ (2023-24): 300
ವಿಶೇಷ ತನಿಖಾಧಿಕಾರಿ : 15
ಈ ಮೇಲಿನ ಎಲ್ಲ ಹುದ್ದೆಗಳಿಗೆ ಈಗ ತಾನೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು, ಮುಂದಿನ 3 ತಿಂಗಳೊಳಗೆ ಅಧಿಸೂಚನೆ ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಆದರೆ ನೇಮಕಾತಿ ಜರೂರು ಆದೇಶ ಗೃಹ ಇಲಾಖೆಯಿಂದ ಬಂದಲ್ಲಿ 40 ದಿನಗಳೊಳಗೆ ಸಹ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ.
ಹುದ್ದೆವಾರು ವಿದ್ಯಾರ್ಹತೆ ವಿವರಗಳು
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಸಿಎಆರ್ / ಡಿಎಆರ್) : ಎಸ್ಎಸ್ಎಲ್ಸಿ / 10ನೇ ತರಗತಿ / ತತ್ಸಮಾನ ವಿದ್ಯಾರ್ಹತೆ .
ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (SRPC ) (KSRP) : ಎಸ್ಎಸ್ಎಲ್ಸಿ / 10ನೇ ತರಗತಿ / ತತ್ಸಮಾನ ವಿದ್ಯಾರ್ಹತೆ .
ಪೊಲೀಸ್ ಸಬ್ಇನ್ಸ್ಪೆಕ್ಟರ್ : ಯಾವುದೇ ಪದವಿ ಪಾಸ್.
ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) : ದ್ವಿತೀಯ ಪಿಯುಸಿ ಪಾಸ್.
ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿರುವ ಹುದ್ದೆಗಳ ವಿವರ
10 ಡಿವೈಎಸ್ಪಿ (ಸಿವಿಲ್) – (2023-24, 2024-25) ನೇ ಸಾಲಿನ ಹುದ್ದೆಗಳು.
4000 ಪಿಸಿ (ಸಿವಿಲ್) 2021-22 ನೇ ಸಾಲಿನ ಹುದ್ದೆಗಳು.
250 ಫಾಲೋವರ್ಸ್ (ಕೆಎಸ್ಆರ್ಪಿ)- 2021-22 ನೇ ಸಾಲಿನ ಹುದ್ದೆಗಳು.
3000 ಪಿಸಿ (ಸಿವಿಲ್)- 2022-23ನೇ ಸಾಲಿನ ಹುದ್ದೆಗಳು.
1500 ಎಪಿಸಿ (ಸಿಎಆರ್ / ಡಿಎಆರ್)- 2022-23ನೇ ಸಾಲಿನ ಹುದ್ದೆಗಳು.