ತಮಿಳು ಚಿತ್ರರಂಗದ ಸ್ಟಾರ್ ನಟರಲ್ಲಿ ಸೂರ್ಯ ಕೂಡ ಒಬ್ಬರು. ಇಂದಿಗೂ ಸ್ಟಾರ್ ನಟನಾಗಿ ಗುರುತಿಸಿಕೊಂಡಿರುವ ಸೂರ್ಯ ಆಕಸ್ಮಿಕವಾಗಿ ಚಿತ್ರರಂಗ್ಕಕೆ ಎಂಟ್ರಿಕೊಟ್ಟವರು. ಸೂರ್ಯ ತಂದೆ ಶಿವಕುಮಾರ್ ನಟನಾಗಿದ್ದರು ತಾನು ನಟನಾಗಬೇಕು ಎಂದು ಯಾವತ್ತು ಕನಸು ಕಂಡಿರಲಿಲ್ಲ. ತಿಂಗಳಿಗೆ 1200 ರೂಪಾಯಿ ಸಂಬಳದಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸೂರ್ಯ ಆರ್ಥಿಕ ಪರಿಸ್ಥಿತಿಯಿಂದಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು.
“ಇದೊಂದು ದೊಡ್ಡ ಕಥೆ. ನನ್ನ ಅಭಿಮಾನಿಗಳಿಗೆ ನನ್ನ ಜೀವನದ ಕಥೆ ಹೇಳಲು ನಾನು ಬಯಸುತ್ತೇನೆ” ಎಂದು ಸೂರ್ಯ ಅವರು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿನ ಆರಂಭಿಕ ದಿನಗಳ ಬಗ್ಗೆ ಹೇಳಿದ್ದಾರೆ. ತರಬೇತಿ ಪಡೆಯುತ್ತಿದ್ದಾಗ ಮೊದಲ 15 ದಿನಕ್ಕೆ ಕೇವಲ 750 ರೂ. ಮೂರು ವರ್ಷಗಳ ನಂತರ ಸೂರ್ಯ ತಿಂಗಳಿಗೆ 8,000 ರೂ. ಸಂಪಾದಿಸುತ್ತಿದ್ದರಂತೆ..
ಕುಟುಂಬದ ಆರ್ಥಿಕ ಸಂಕಷ್ಟದ ಬಗ್ಗೆ ತಾಯಿ, 25 ಸಾವಿರ ಸಾಲ ಮಾಡಿದ್ದೇನೆ, ನಿಮ್ಮ ತಂದೆಗೆ ಗೊತ್ತಿಲ್ಲ ಎಂದರು. ಆಶ್ಚರ್ಯಗೊಂಡ ಸೂರ್ಯ ಅವರ ಉಳಿತಾಯದ ಬಗ್ಗೆ ವಿಚಾರಿಸಿದಾಗ ಬ್ಯಾಂಕ್ ಬ್ಯಾಲೆನ್ಸ್ ಒಂದು ಲಕ್ಷ ದಾಟಿಲ್ಲ ಎಂದು ತಿಳಿಸಿದರು. ತಂದೆ ಶಿವಕುಮಾರ್ ಕೂಡ ಆಗ ಹೆಚ್ಚು ಸಿನಿಮಾ ಮಾಡಿರಲಿಲ್ಲ.
“ಅಮ್ಮ ಸಾಲವನ್ನು ತೀರಿಸಲು ಕಷ್ಟಪಡುತ್ತಿದ್ದಾಗ ತುಂಬಾ ನೋವಾಗಿತ್ತು. ನಾನು ಏನು ಮಾಡುತ್ತಿದ್ದೇನೆ ಎಂದು ನನಗೆ ಅನಿಸಿತು.. ನನ್ನ ತಂದೆ ಸಿನಿಮಾ ಮಾಡಿದರೂ ಅಮ್ಮ ಸಂಬಳದ ಬಗ್ಗೆ ಕೇಳುತ್ತಿರಲಿಲ್ಲ, ಅವರು ಕೊಟ್ಟಾಗ ತೆಗೆದುಕೊಳ್ಳುತ್ತಿದ್ದರು” ಎಂದು ನಟ ಹೇಳಿದ್ದಾರೆ..
ಮೊದಲು ಫ್ಯಾಕ್ಟರಿ ನಿರ್ಮಿಸಿ ವ್ಯಾಪಾರ ಮಾಡಲು ಯೋಚಿಸಿದೆ.. ಅದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ನಿರೀಕ್ಷೆ ತಂದೆಯ ಮೇಲಿತ್ತು. ಆದರೆ ಅಮ್ಮನೊಂದಿಗಿನ ಸಂಭಾಷಣೆ ಎಲ್ಲವನ್ನೂ ಬದಲಾಯಿಸಿತು ಎಂದು ಹೇಳಿದರು. ಹಲವಾರು ಸಿನಿಮಾ ಆಫರ್ ಗಳಿದ್ದರೂ ವಂಶಸ್ಥರಿಗೆ ಚಿತ್ರರಂಗಕ್ಕೆ ಪ್ರವೇಶಿಸುವ ಇರಾದೆ ಇರಲಿಲ್ಲ. “ಕ್ಯಾಮೆರಾ ಮುಂದೆ ಹೋಗುವ ಐದು ದಿನಗಳ ಮೊದಲು ನಾನು ಇದನ್ನು ಮಾಡುತ್ತೇನೆ ಎಂದು ನಾನು ಭಾವಿಸಿರಲಿಲ್ಲ“ಎಂದು ಸೂರ್ಯ ಹೇಳಿದ್ದಾರೆ.
ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಸೂರ್ಯ, “ನಾನು ಹಣಕ್ಕಾಗಿ ಈ ವೃತ್ತಿಗೆ ಬಂದಿದ್ದೇನೆ, ನನ್ನ ತಾಯಿ ಮಾಡಿದ ಸಾಲವನ್ನು ತೀರಿಸಲು ನಾನು ಈ ಕ್ಷೇತ್ರಕ್ಕೆ ಪ್ರವೇಶಿಸಿದ್ದೇನೆ. ಹಾಗಾಗಿ ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿ ಸೂರ್ಯ ಆದೆ” ಎಂದಿದ್ದಾರೆ.
ತನ್ನ ಬಗ್ಗೆ ಏನೂ ತಿಳಿಯದ ಜನರ ನಡುವೆ ಸೆಟ್ನಲ್ಲಿ ತನ್ನ ಮೊದಲ ಶಾಟ್ ಅನ್ನು ನೆನಪಿಸಿಕೊಂಡು… “ನನ್ನ ಶಾಟ್ ನಂತರ ಅವರು ಶಿಳ್ಳೆ ಹೊಡೆದರು ಮತ್ತು ಚಪ್ಪಾಳೆ ತಟ್ಟಿದರು. ಆಗಿನಿಂದ ನನ್ನ ಜೀವನವೇ ಬದಲಾಗಿದೆ.. ಪ್ರೇಕ್ಷಕರು ಬದಲಾಗಿದ್ದಾರೆ, ನನಗೆ ಇನ್ನೂ ಅದೇ ಪ್ರೀತಿ ಸಿಗುತ್ತಿದೆ” ಎಂದು ಸೂರ್ಯ ಹೇಳಿದ್ದಾರೆ.