ತೀರ್ಥ ಅಥವಾ ಪವಿತ್ರ ನೀರು ಕೇವಲ ಸಾಮಾನ್ಯ ನೀರಲ್ಲ. ಆದರೆ ಕರ್ಪೂರ, ಲವಂಗ, ಕೇಸರಿ, ಏಲಕ್ಕಿ, ತುಳಸಿ ಸೇರಿದಂತೆ ವಿವಿಧ ಪದಾರ್ಥಗಳ ಸಂಯೋಜನೆಯಾಗಿದೆ. ಮೂರು ಚಮಚದಷ್ಟು ತೀರ್ಥವನ್ನು ಭಕ್ತರಿಗೆ ಹಂಚಲಾಗುತ್ತದೆ. ಈ ನೀರು ದೈಹಿಕ-ಮಾನಸಿಕ ಚಿಕಿತ್ಸೆಯ ಮೂಲವಾಗಿದೆ. ನೈಸರ್ಗಿಕ ರಕ್ತ ಶುದ್ಧೀಕರಣ ಸೇರಿದಂತೆ ಉತ್ತಮ ಔಷಧೀಯ ಮೌಲ್ಯವನ್ನು ಹೊಂದಿದೆ. ಅದೇ ನೀರಿನಿಂದ ವಿಗ್ರಹವನ್ನು ಸ್ನಾನ ಮಾಡಿರುವುದರಿಂದ ನೀರಿನಲ್ಲಿ ಕಾಂತೀಯ ವಿಕಿರಣವೂ ಇರುತ್ತದೆ. ಇನ್ನು, ಎರಡು ನಿರ್ದಿಷ್ಟ ಆಶೀರ್ವಾದಗಳು ಅಂದರೆ ತೀರ್ಥ ಸ್ವೀಕಾರ ಮತ್ತು ಶಠಾರಿಗೆ ಭಕ್ತರ ಎಲ್ಲಾ ಪಾಪಗಳನ್ನು ತೊಳೆಯುವ ಶಕ್ತಿ ಇದೆ.
ದೇವಸ್ಥಾನದಲ್ಲಿ ತೀರ್ಥ ಸೇವನೆ ಮಾಡುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಆಗ ಅದರ ಪೂರ್ತಿ ಫಲ ಸಿಗುತ್ತದೆ. ತೀರ್ಥ ಜಲವನ್ನು ಹೇಗೆ ಸ್ವೀಕರಿಸಬೇಕು ಎಂದು ಕೂಡ ಶಾಸ್ತ್ರ ಹೇಳುತ್ತದೆ.
ನಾವು ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲಾ ಅರ್ಚಕರು ನಮಗೆ ಪವಿತ್ರ ನೀರನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ನಾವು ಹಸ್ತ ಗೋಕರ್ಣ ಮುದ್ರೆಯನ್ನು ಮಾಡಿ ತೀರ್ಥವನ್ನು ತೆಗೆದುಕೊಳ್ಳುತ್ತೇವೆ. ಗೋಕರ್ಣ ಮುದ್ರೆಯಲ್ಲಿ ನಮ್ಮ ಹೆಬ್ಬೆರಳು ತೋರ್ಬೆರಳನ್ನು ನಿಯಂತ್ರಿಸುತ್ತದೆ. ತೋರ್ಬರಳಿನ ಬೆನ್ನಿನ ಮೇಲೆ ಹೆಬ್ಬೆರಳನ್ನು ಇಡಲಾಗುತ್ತದೆ. ಮತ್ತುಳಿದ ಮೂರು ಬೆರಳುಗಳು ಮುಂದಕ್ಕೆ ಚಾಚಿಕೊಂಡಿರುತ್ತದೆ
ಮುದ್ರೆಯನ್ನು ಮಾಡಿಕೊಂಡ ನಂತರ ಭಕ್ತರು ಅಂಗೈಯ ಆಳವಾದ ಭಾಗದಲ್ಲಿ ದೇವರ ಪವಿತ್ರ ನೀರನ್ನು ತೆಗೆದುಕೊಂಡು ಬಾಯಿಯಿಂದ ಯಾವುದೇ ಶಬ್ದವನ್ನು ಮಾಡದೆ ಪ್ರಾರ್ಥಿಸಬೇಕು. ತೀರ್ಥ ತೆಗೆದುಕೊಳ್ಳುವಾಗಲೇ ಸ್ವಲ್ಪ ಪ್ರಮಾಣದ ಪವಿತ್ರ ನೀರನ್ನು ಮಾತ್ರ ತೆಗೆದುಕೊಳ್ಳಬೇಕು. ಇದರ ಹಿಂದಿರುವ ಕಾರಣವೇನೆಂದರೆ, ತೀರ್ಥವು ಮಲವಾಗಿ ಅಲ್ಲ, ಲಾಲಾರಸವಾಗಿ ಬದಲಾಗಬೇಕು. ತೀರ್ಥ ತೆಗೆದುಕೊಳ್ಳುವುದರ ವಿಧಾನ ಮತ್ತು ಮಹತ್ವದ ಬಗ್ಗೆ ತಿಳಿದುಕೊಳ್ಳಿ.
1. ಎಷ್ಟು ಬಾರಿ ತೀರ್ಥ ದ ನೀರನ್ನು ತೆಗೆದುಕೊಳ್ಳಬೇಕು..?
ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಸೂಚನೆಯ ಪ್ರಕಾರ, ಮನೆಯಲ್ಲಿ ಸಾಮಾನ್ಯವಾಗಿ ಪೂಜೆ ಮಾಡಿದ ನಂತರ, ತೀರ್ಥವನ್ನು ತೆಗೆದುಕೊಳ್ಳಬಬೇಕು. ಅಂದು ಅನ್ನಗ್ರಹಣದ ಸಾಧ್ಯತೆ ಇಲ್ಲದಿದ್ದರೆ ಮೂರು ಬಾರಿ ತೀರ್ಥವನ್ನು ತೆಗೆದಿಕೊಳ್ಳಬೇಕು. ನೀವು ದೇವಸ್ಥಾನಕ್ಕೆ ಹೋದಾಗ ಒಮ್ಮೆ ಮಾತ್ರ ತೀರ್ಥದ ನೀರನ್ನು ತೆಗೆದುಕೊಳ್ಳಿ. ಏಕಾದಶಿಯಂದು ಉಪವಾಸ ಮಾಡುವ ಆರಾಧಕರು ಅಂದು ಉಪವಾಸವನ್ನು ಆಚರಿಸುತ್ತಾರೆ ಮತ್ತು ಮರುದಿನ ಸೂರ್ಯೋದಯದಲ್ಲಿ ಮತ್ತೊಮ್ಮೆ ತೀರ್ಥವನ್ನು ತೆಗೆದುಕೊಳ್ಳಬೇಕು. ಇದು ನಿಮ್ಮ ಉಪವಾಸ ವ್ರತದ ಮುಕ್ತಾಯವನ್ನು ಸೂಚಿಸುತ್ತದೆ
ಮನೆಯಲ್ಲಿ ನೈಮಿತ್ತಿಕ ಸತ್ಯನಾರಾಯಣ ಪೂಜೆಯಂತಹ ಮಹಾಪೂಜೆಯು ನಡೆಯುತ್ತಿದ್ದರೆ ಅಂದು ಬೆಳಗ್ಗೆ ನಿತ್ಯ ಪೂಜೆಯ ನಂತರ ಪುಣ್ಯಜಲವನ್ನು ತಕ್ಷಣ ತೆಗೆದುಕೊಳ್ಳಬಾರದು. ಮಹಾಪೂಜೆ ಅಥವಾ ಶ್ರಾದ್ಧದ ನಂತರ, ಪೂಜೆಯ ಕಥೆಯನ್ನು ಕೇಳುವ ಮೊದಲು ತೀರ್ಥದ ನೀರನ್ನು ತೆಗೆದುಕೊಳ್ಳಿ. ದೇವ ಗೌರವ ಮತ್ತು ಪಿತೃ ಗೌರವವನ್ನು ಈ ಮೂಲಕ ಸರಳಗೊಳಿಸಬಹುದು.
2. ಈ ಸಂದರ್ಭಗಳಲ್ಲಿ ತೀರ್ಥವನ್ನು ತೆಗೆದುಕೊಳ್ಳಿ:
ಯಾರಿಗಾದರೂ ಕೊನೆಯ ಸಮಯ ಬಂದಿದ್ದರೆ ಅಂದರೆ ಯಾವುದೇ ವ್ಯಕ್ತಿ ಸಾವಿನ ಅಂತಿಮ ಕ್ಷಣದಲ್ಲಿದ್ದರೆ ತುಳಸಿಪತ್ರೆ (ತುಳಸಿ ಎಲೆ) ಮತ್ತು ದೇವತೀರ್ಥವನ್ನು ಅವರ ಬಾಯಿಗೆ ಹಾಕಲಾಗುತ್ತದೆ. ಯಾರಾದರೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರಿಗೆ ತೀರ್ಥದ ನೀರನ್ನು ಕುಡಿಸಬೇಕು. ಕುಟುಂಬದ ಯಾವುದೇ ಸದಸ್ಯರು ಗಾಸಿಪ್ ಮಾಡುತ್ತಿದ್ದರೆ ಅಥವಾ ಧರ್ಮನಿಂದೆಯಂತಹ ಅಪರಾಧಗಳನ್ನು ಮಾಡಿದ್ದರೆ, ಮೊದಲು ಅವರಿಗೆ ತೀರ್ಥದ ನೀರನ್ನು ತೆಗೆದುಕೊಳ್ಳುವಂತೆ ಮಾಡಿ. ತೀರ್ಥದ ನೀರನ್ನು ಸಂಜೆಯ ವೇಳೆಗೆ ಕಲುಷಿತಗೊಳ್ಳುತ್ತದೆ.
ಪಂಚಾಮೃತ ತೀರ್ಥ ಪ್ರಾಶನ ಮಾಡಿದ ನಂತರ ನಿಮ್ಮ ಕೈಗಳನ್ನು ನಿಮ್ಮ ತಲೆಯ ಮುಂಭಾಗದಿಂದ ಹಿಂದಕ್ಕೆ ತೆಗೆದುಕೊಂಡು ಹೋಗುವ ಮೂಲಕ ತೀರ್ಥವನ್ನು ತೆಗೆದುಕೊಳ್ಳಿ. ಇದನ್ನು ಮಾಡುವುದರಿಂದ ನಿಮ್ಮ ತೀರ್ಥ್ ಪ್ರಕ್ರಿಯೆಯು ಮುಕ್ತಾಯವಾಗಿದೆ ಎಂದರ್ಥ.
ಪೂಜೆಯ ನಂತರ ಮಾತ್ರ ನಾವು ತೀರ್ಥವನ್ನು ತೆಗೆದುಕೊಳ್ಳಬೇಕೆಂಬದನ್ನು ಗಮನದಲ್ಲಿಟ್ಟುಕೊಳ್ಳಿ. ಮತ್ತು ತೀರ್ಥವನ್ನು ತೆಗೆದುಕೊಳ್ಳುವಾಗ ನಾವು ಈ ಮೇಲಿನ ಎಲ್ಲಾ ನಿಯಮಗಳನ್ನು ಅನುಸರಿಸಬೇಕು. ಇದರಲ್ಲಿ ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಮತ್ತೊಂದು ಪ್ರಮುಖ ವಿಚಾರವೆಂದರೆ ನೀವು ತೀರ್ಥವನ್ನು ತೆಗೆದುಕೊಂಡ ನಂತರ ನಿಮ್ಮ ಎರಡೂ ಅಂಗೈಯನ್ನು ತಲೆಗೆ ಸವರಿಕೊಳ್ಳಬಾರದು ಬದಲಾಗಿ ಎರಡು ಅಂಗೈಗಳನ್ನು ಉಜ್ಜಬೇಕು.