ಹಾಸನ:- ನಿನ್ನೆಯಿಂದ ಹಾಸನಾಂಬಾ ಸನ್ನಿಧಿಗೆ ಭಕ್ತರ ದಂಡೇ ಹರಿದು ಬಂದಿದೆ.
ದಲಿತ ದೌರ್ಜನ್ಯ ಕೇಸ್: ಐತಿಹಾಸಿಕ ತೀರ್ಪು ನೀಡಿದ ಕೋರ್ಟ್, 98 ಆರೋಪಿಗಳಿಗೆ ಜೀವಾವಧಿ ಶಿಕ್ಷೆ!
ಗರ್ಭಗುಡಿ ಬಾಗಿಲನ್ನು ತೆರೆಯುತ್ತಿದ್ದಂತೆಯೇ ಭಕ್ತರು ಹಾಗೂ ಸಾರ್ವಜನಿಕರು, ಹಾಸನಾಂಬೆಗೆ ಉಘೇ ಉಘೇ ಎಂದು ಘೋಷಣೆ ಕೂಗಿ ಭಕ್ತಿಭಾವ ಮೆರೆದರು. ಮಂಗಳವಾದ್ಯಗಳೊಂದಿಗೆ ಪೂಜಾ ಸಾಮಗ್ರಿ ತಂದು ಗರ್ಭಗುಡಿ ಬಾಗಿಲ ಎದುರು ವಿಶೇಷ ಪೂಜೆ ನೆರವೇರಿಸಿದ ಅರ್ಚಕ ವೃಂದ, ನಂತರ ನಿಗದಿತ ಮುಹೂರ್ತದ ಸಮಯದಲ್ಲಿ ಬಾಗಿಲು ತೆರೆದು ದರ್ಶನಕ್ಕೆ ಅವಕಾಶ ನೀಡಿದರು.
ಮೊದಲ ದಿನ ಸಾರ್ವಜನಿಕರಿಗೆ ದರ್ಶನ ಇಲ್ಲ ಎಂದು ಜಿಲ್ಲಾಡಳಿತ ಕಟ್ಟು ನಿಟ್ಟಾಗಿ ಹೇಳಿತ್ತಾದರೂ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮೂಹ ದೇವಾಲಯ ಆವರಣಕ್ಕೆ ಬಂದಿತ್ತು. ನೂಕು ನುಗ್ಗಲಿನ ನಡುವೆಯೇ ದೇವಿ ದರ್ಶನಕ್ಕೆ ಲಭಿಸಿದ ಅವಕಾಶವನ್ನ ಬಳಸಿಕೊಂಡ ಸಹಸ್ರಾರು ಜನರು ಮೊದಲ ದಿನವೇ ಆರದ ದೀಪ ನೋಡಿ ಪುನೀತರಾದರು