ವಿಜಯಪುರ:-ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಬೈಕ್ ಸವಾರನ ಮೇಲೆ ಕ್ರೇನ್ ಹರಿದು ವ್ಯಕ್ತಿ ದುರ್ಮರಣ ಹೊಂದಿದ ಘಟನೆ ಜರುಗಿದೆ.
40 ವರ್ಷದ ಶಿವಪುತ್ರಪ್ಪ ಭಜಂತ್ರಿ ಸಾವನ್ನಪ್ಪಿದ ವ್ಯಕ್ತಿ. ಪಟ್ಟಣದ ಹೋಂಡಾ ಶೋರೂಂ ಬಳಿ ಮುದ್ದೇಬಿಹಾಳ-ನಾರಾಯಣಪುರ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಅಪಘಾತದ ಬಳಿಕ ಸ್ಥಳದಲ್ಲೇ ಕ್ರೇನ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.