ಬಹುಪಾಲು ಜನರಿಗೆ, ಅವರು ಬೆಳಗ್ಗೆ ಎಚ್ಚರವಾದ ನಂತರ ಅವರ ಮನಸ್ಸಿಗೆ ಬರುವ ಮೊದಲ ವಿಷಯ ಎಂದರೆ ಅವರ ಮೊಬೈಲ್ ಫೋನ್ ಸ್ಕ್ರೀನ್ ಗಳ ಸ್ಕ್ರೋಲ್ ಮಾಡುವ ಬಯಕೆ ಉಂಟಾಗುವುದು ಮತ್ತು ಇಂದು ಅದೇ ಒಂದು ದೊಡ್ಡ ಸಮಸ್ಯೆಯಾದಂತಿದೆ.
ಅದಲ್ಲದೆ ಬೆಳಗ್ಗೆ ಎದ್ದಾಗ ನಾವು ಮೊದಲಿಗೆ ಏನು ನೋಡುತ್ತೇವೆಯೋ ಅದರ ಪರಿಣಾಮ ಇಡೀ ದಿನ ನಮ್ಮ ಮೇಲೆ ಉಂಟಾಗುತ್ತೆ ಎಂದು ಹೇಳಲಾಗುತ್ತೆ.
ಬೆಳಗ್ಗಿನ ಪ್ರಾರಂಭವು ಸರಿಯಾಗಿದ್ದರೆ, ಆಗ ದಿನವೂ ಚೆನ್ನಾಗಿ ನಡೆಯುತ್ತೆ. ಆದರೆ ಅನೇಕರು ಎದ್ದ ತಕ್ಷಣ ತಿಳಿಯದೆ ನೋಡುವ ಕೆಲವು ತಪ್ಪುಗಳು ಇಡೀ ದಿನದ ಮೇಲೆ ಪರಿಣಾಮ ಬೀರುತ್ತೆ. ಹಾಗಿದ್ರೆ ಬೆಳಗ್ಗೆ ಎದ್ದು ಏನು ನೋಡಬಾರದು?.
ಎಂಜಲು ಮಡಕೆ
ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ರಾತ್ರಿಯಲ್ಲಿ ಅಡುಗೆಮನೆಯಲ್ಲಿ ಉಳಿಯುವ ಕೊಳಕು ಪಾತ್ರೆಗಳು ಮನೆಯಲ್ಲಿ ಬಡತನವನ್ನು ತರುತ್ತವೆ ಎಂದು ಹೇಳಲಾಗಿದೆ. ಕೆಲವರು ಅನಿವಾರ್ಯ ಕಾರಣಗಳಿಂದ ಹೀಗೆ ಮಾಡುತ್ತಾರೆ. ಆದರೆ ಈ ತಪ್ಪು ನಿಮ್ಮ ಮೇಲೆ ಭಾರಿ ಪರಿಣಾಮ ಬೀರುತ್ತೆ. ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀಳಲು ನೀವು ಬಯಸದಿದ್ದರೆ, ನೀವು ಬೆಳಿಗ್ಗೆ ಎದ್ದ ತಕ್ಷಣ ಕೊಳಕು ಪಾತ್ರೆಗಳನ್ನು ನೋಡಬೇಡಿ.
ಸಾಕು ಪ್ರಾಣಿ
ಸಾಮಾನ್ಯವಾಗಿ, ಕೆಲವು ಜನರು ತಮ್ಮ ಸಾಕುಪ್ರಾಣಿಗಳನ್ನು ಒಟ್ಟಿಗೆ ಮಲಗಿಸುತ್ತಾರೆ ಮತ್ತು ಬೆಳಗ್ಗೆ ಎದ್ದ ತಕ್ಷಣ ಅವುಗಳ ಮುಖ ನೋಡುತ್ತಾರೆ. ನೀವು ನಿಮ್ಮ ಸಾಕುಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತೀರಿ ನಿಜ, ಆದರೆ ವಾಸ್ತು ಪ್ರಕಾರ, ಬೆಳಿಗ್ಗೆ ಸಾಕುಪ್ರಾಣಿಗಳ ಮುಖ ನೋಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಸಾಧ್ಯವಾದರೆ, ಅವುಗಳನ್ನು ನಿಮ್ಮೊಂದಿಗೆ ಮಲಗಿಸಬೇಡಿ.
ನೆರಳನ್ನು ನೋಡೋದು
ಬೆಳಿಗ್ಗೆ ಎದ್ದು ತನ್ನ ಸ್ವಂತ ಅಥವಾ ಬೇರೊಬ್ಬರ ನೆರಳನ್ನು ನೋಡಬಾರದು ಎಂದು ವಾಸ್ತು ಹೇಳುತ್ತದೆ. ನೀವು ಸೂರ್ಯನನ್ನು ನೋಡಲು ಹೊರಗೆ ಹೋದರೆ ಮತ್ತು ಸೂರ್ಯನು ಪೂರ್ವದಿಂದ ಉದಯಿಸುತ್ತಿರುವಾಗ ಪಶ್ಚಿಮ ದಿಕ್ಕಿನಲ್ಲಿ ನಿಮ್ಮ ನೆರಳನ್ನು ನೋಡುವುದು ಅಶುಭ ಸಂಕೇತವಾಗಿದೆ.
ಹಾಳಾದ ಗಡಿಯಾರ
ಮನೆಯಲ್ಲಿ ಹಾಳಾದ ಅಥವಾ ನಿಂತ ಗಡಿಯಾರವನ್ನು ಇಡೋದು ಹಾನಿಕಾರಕ. ಯಾವುದೋ ಕಾರಣಗಳಿಂದ ನೀವು ಗಡಿಯಾರವನ್ನು ಸರಿಪಡಿಸಲು ಸಾಧ್ಯವಾಗದಿದ್ದರೆ, ಅದನ್ನು ಸಾಧ್ಯವಾದಷ್ಟು ಬೇಗ ಸರಿಪಡಿಸಿ, ಇಲ್ಲವಾದರೆ ಮನೆಯಲ್ಲಿ ನೆಗೆಟಿವಿಟಿ ತುಂಬುತ್ತೆ. ಅಲ್ಲದೆ, ನೀವು ಬೆಳಗ್ಗೆ ಎದ್ದಾಗ, ನಿಂತ ಗಡಿಯಾರವ ನೋಡಬೇಡಿ. ಇದು ಕೆಟ್ಟ ಸಮಯದ ಸಂಕೇತ ಎಂದು ಹೇಳಲಾಗುತ್ತದೆ.
ಪ್ರಾಣಿಗಳು ಮತ್ತು ಪಕ್ಷಿಗಳ ಆಕ್ರಮಣಕಾರಿ ಚಿತ್ರ
ವಾಸ್ತು ಮಾತ್ರವಲ್ಲ, ಜ್ಯೋತಿಷ್ಯ ಶಾಸ್ತ್ರದಲ್ಲಿ ಬೆಳಗಿನ ಸಮಯವು ತುಂಬಾ ಮಂಗಳಕರವಾಗಿದೆ ಎಂದು ಹೇಳಿದೆ. ಬೆಳಗ್ಗೆ ಎದ್ದ ತಕ್ಷಣ ಆಕ್ರಮಣಕಾರಿ ಪ್ರಾಣಿ ಅಥವಾ ಪಕ್ಷಿಯ ಚಿತ್ರಗಳನ್ನು ನೋಡಬಾರದು ಎಂದು ಶಾಸ್ತ್ರದಲ್ಲಿ ತಿಳಿಸಿದೆ. ಇದರಿಂದ ನೀವು ಯಾವುದಾದರೊಂದು ವಿವಾದದಲ್ಲಿ ಸಿಲುಕುತ್ತೀರಿ ಎಂದು ಸೂಚಿಸುತ್ತೆ.
ಕನ್ನಡಿ
ಬೆಳಗ್ಗೆ ನಮ್ಮ ದೇಹದಲ್ಲಿ ನಕಾರಾತ್ಮಕ ಶಕ್ತಿ ಇರುತ್ತೆ, ಹಾಗಾಗಿ, ಎದ್ದ ತಕ್ಷಣ ನಿಮ್ಮ ಮುಖ ಕನ್ನಡಿಯಲ್ಲಿ ನೋಡುವುದು ಹಾನಿಕಾರಕವೆಂದು ಹೇಳಲಾಗುತ್ತೆ. ಇದು ಹಣದ ನಷ್ಟವನ್ನು ಉಂಟು ಮಾಡುತ್ತೆ, ಹಾಗೆಯೇ ನಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತೆ. ಬೆಳಿಗ್ಗೆ ಎದ್ದು ಮೊದಲು ಮುಖ ತೊಳೆಯಿರಿ ಅಥವಾ ಸ್ನಾನ ಮಾಡಿ ನಂತರ ಕನ್ನಡಿಯನ್ನು ನೋಡಿ.