ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಿ.ಪಿ ಯೋಗೇಶ್ವರ್ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಇದರ ಬೆನ್ನಲ್ಲೇ ಪಕ್ಷದ ಉಳಿವಿಗಾಗಿ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕು ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಮನವಿ ಮಾಡಿದ್ದಾರೆ. ಚನ್ನಪಟ್ಟಣ ಅಭ್ಯರ್ಥಿ ಕುರಿತು ಜೆಪಿ ಭವನದಲ್ಲಿ ಮಾತನಾಡಿದ ಅವರು, ಚನ್ನಚನ್ನಪಟ್ಟಣದಿಂದ ನಿಖಿಲ್ ನಿಲ್ಲಬೇಕು ಎಂದು ಕಾರ್ಯಕರ್ತರು, ಮುಖಂಡರು ಒತ್ತಾಯ ಮಾಡುತ್ತಿದ್ದಾರೆ.
ಆದರೆ ನಿಖಿಲ್ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂದು ಹೇಳುತ್ತಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಅವರು ನಿಖಿಲ್ ಜೊತೆ ಮಾತನಾಡುತ್ತಿದ್ದಾರೆ. ಎಲ್ಲರು ನಿಖಿಲ್ ಅಭ್ಯರ್ಥಿ ಆಗಬೇಕು ಎಂದು ಹೇಳುತ್ತಿದ್ದಾರೆ. ಇವತ್ತು ಕುಮಾರಸ್ವಾಮಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್! 2027 ರೊಳಗೆ ದೇಶದ 11 ಕೋಟಿ ರೈತರಿಗೆ ‘ಡಿಜಿಟಲ್ ಐಡಿ’ ಕಾರ್ಡ್
ಪಕ್ಷ ಉಳಿಯಬೇಕಾದರೆ ನಿಖಿಲ್ ಸ್ಪರ್ಧೆ ಆಗಬೇಕು ಎಂದು ನಾವು ಹೇಳುತ್ತಿದ್ದೇವೆ. ನಿಖಿಲ್ ನಿಂತರೆ ದೇವೇಗೌಡರ ಕುಟುಂಬ ಮಾತ್ರ ಇರೋದಾ ಎನ್ನುತ್ತಾರೆ. ಅನಿತಾ ಕುಮಾರಸ್ವಾಮಿ ನಿಂತಿದ್ದರೂ ಇದೇ ಹೇಳಿದ್ದರು. ಈಗ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಗೆ ಕೊಡಿ ಎಂದರೆ ನಿಖಿಲ್ಗೆ ಭಯ ಎನ್ನುತ್ತಾರೆ. ವಯನಾಡ್ನಲ್ಲಿ ರಾಜೀನಾಮೆ ಕೊಟ್ಟು ಪ್ರಿಯಾಂಕಾ ನಿಂತರೆ ಅದು ಕುಟುಂಬ ರಾಜಕೀಯ ಅಲ್ಲ. ಇಲ್ಲಿ ಮಾತ್ರ ನಿಖಿಲ್ ನಿಂತರೆ ಕುಟುಂಬ ರಾಜಕೀಯ ಎನ್ನುತ್ತಾರೆ. ಇದು ಹೇಗೆ ಎಂದು ಕಾಂಗ್ರೆಸ್ಗೆ ಪ್ರಶ್ನಿಸಿದರು.