ತಮಿಳುನಾಡು: ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮತ್ತೊಂದು ವಿವಾದವನ್ನು ಎಳೆದುಕೊಂಡಿದೆ. ಈ ಹಿಂದೆ ಆಡಳಿತಾರೂಢ ಡಿಎಂಕೆಯು ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ಚೀನಾ ಧ್ವಜವನ್ನು ಮುದ್ರಿಸುವ ಮೂಲಕ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಇದೀಗ ಮತ್ತೆ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳು ಪಾಕಿಸ್ತಾನ, ಚೀನಾಕ್ಕೆ ಸೇರಿದೆ ಎಂದು ತಪ್ಪಾಗಿ ಚಿತ್ರಿಸಲಾದ ಭಾರತದ ನಕ್ಷೆಯನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡು ಯಡವಟ್ಡು ಮಾಡಿಕೊಂಡಿದೆ.
ಡಿಎಂಕೆ ದೇಶದ್ರೋಹ ನಡವಳಿಕೆ ಪ್ರದರ್ಶಿಸಿದೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾಡಿದ್ದಾರೆ. ವ್ಯಾಪಕ ಟೀಕೆ, ವಿವಾದದ ಬಳಿಕ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ. ಬಳಿಕ ಭಾರತದ ಸರಿಯಾದ ನಕ್ಷೆಯೊಂದಿಗೆ ದ್ರಾವಿಡ ಮಾದರಿ ಆಡಳಿತದಲ್ಲಿ ತಮಿಳುನಾಡಿನ ಆರ್ಥಿಕತೆ ಶಿಕ್ಷಣದಂತೆ ಬೆಳೆಯುತ್ತಿದೆ! ಎಂಬ ಕ್ಯಾಪ್ಶನ್ ಹಂಚಿಕೊಂಡಿದೆ.
DRDO CAIR Recruitment: ಎಂಜಿನಿಯರಿಂಗ್ ಮುಗಿಸಿದ್ರೂ ಕೆಲಸ ಸಿಗ್ತಿಲ್ವಾ.? ಇಲ್ಲಿದೆ ನೋಡಿ ಜಾಬ್ ಆಫರ್
ಹಿಂದಿನಿಂದಲೂ ಜಮ್ಮು ಮತ್ತು ಕಾಶ್ಮೀರದ ಮೇಲೆ ಭಾರತದ ಹಕ್ಕಿನ ಬಗ್ಗೆ ಡಿಎಂಕೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಬಂದಿತ್ತು.. 2019ರಲ್ಲಿ ಖಾಸಗಿ ಟಿವಿ ಚರ್ಚೆಯ ಸಮಯದಲ್ಲಿ ಪಕ್ಷದ ವಕ್ತಾರ ಎ.ಸರವಣನ್ ಅವರು ಕಾಶ್ಮೀರವು “ಭಾರತದ ಅವಿಭಾಜ್ಯ ಅಂಗವಲ್ಲ” ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು. ಬಳಿಕ ಡಿಎಂಕೆ ಈ ಹೇಳಿಕೆಯನ್ನು ಹಿಂಪಡೆದು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿಕೆ ನೀಡಿತ್ತು.