ವಯನಾಡು: ಉಪ ಚುನಾವಣೆ ಹಿನ್ನೆಲೆ ಪ್ರಿಯಾಂಕಾ ವಾದ್ರಾ ಕುಟುಂಬ ಸಮೇತ ವಯನಾಡಿಗೆ ಆಗಮಿಸಿ ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ. ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಉಪಚುನಾವಣೆಯ ಅಖಾಡದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸದ್ಯ ಪ್ರಿಯಾಂಕಾ ಗಾಂಧಿ ಅಫಿಡವಿಟ್ ಸಲ್ಲಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಸುಮಾರು 12 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರೆ, ಅವರ ಪತಿ ರಾಬರ್ಟ್ ವಾದ್ರಾ ಅವರು ಸುಮಾರು 66 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ವಯನಾಡು ಲೋಕಸಭಾ ಉಪಚುನಾವಣಾ ಕಣದಲ್ಲಿರುವ ಪ್ರಿಯಾಂಕಾ ಗಾಂಧಿ ಬುಧವಾರ ನಾಮಪತ್ರ ಸಲ್ಲಿಕೆ ಮಾಡಿದ್ದು ಅಫಿಡವಿತ್ನಲ್ಲಿ ಆಸ್ತಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ವಾದ್ರಾ ದಂಪತಿಯ ಆಸ್ತಿ ಮೌಲ್ಯ ಬಹಿರಂಗವಾಗಿದೆ.
ಬಾಡಿಗೆ, ಬ್ಯಾಂಕ್ ಬಡ್ಡಿ ದರ, ಇತರ ಹೂಡಿಕೆಯಿಂದ 2023-24ರ ಹಣಕಾಸು ವರ್ಷದಲ್ಲಿ 46.39 ಲಕ್ಷ ರೂ. ಆದಾಯ ಬಂದಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. ಪ್ರಿಯಾಂಕಾ 4.24 ಕೋಟಿ ರೂ. ಚರಾಸ್ತಿ, 7.74 ಕೋಟಿ ರೂ. ಸ್ಥಿರಾಸ್ತಿಯನ್ನು ಹೊಂದಿದ್ದಾರೆ.
UIIC Jobs: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಭರ್ಜರಿ ಉದ್ಯೋಗಾವಕಾಶ! ಬೇಗ ಅರ್ಜಿ ಹಾಕಿ
ಪ್ರಿಯಾಂಕಾ ಅವರ ಅತ್ಯಮೂಲ್ಯ ಆಸ್ತಿ ಶಿಮ್ಲಾ ಬಳಿಯಿರುವ ಅವರ 12,000 ಚದರ ಅಡಿ ಫಾರ್ಮ್ಹೌಸ್ ಆಗಿದೆ. ಅಫಿಡವಿಟ್ ಪ್ರಕಾರ ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ 5.64 ಕೋಟಿ ರೂ. ಆಗಿದೆ. 8 ಲಕ್ಷ ರೂ. ಮೌಲ್ಯದ ಹೋಂಡಾ ಸಿಆರ್ವಿ ಕಾರನ್ನು ಹೊಂದಿದ್ದಾರೆ. ಇದನ್ನು ಪತಿ ವಾದ್ರಾ ಉಡುಗೊರೆ ನೀಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿದ್ದು ಪ್ರಸ್ತುತ ಅದರ ಮೌಲ್ಯ 2.24 ಕೋಟಿ ರೂ. ಆಗಿದೆ ಎಂದು ತಿಳಿಸಿದ್ದಾರೆ. 1.16 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ. ರಾಹುಲ್ ಗಾಂಧಿ ಜೊತೆಗೆ ಮೆಹ್ರೌಲಿಯಲ್ಲಿ 2.10 ಕೋಟಿ ರೂ. ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. 2012-13 ರಲ್ಲಿ 15.75 ಲಕ್ಷ ರೂ. ತೆರಿಗೆ ಬಾಕಿ ಇರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಎರಡು ಎಫ್ಐಆರ್, 1 ನೋಟಿಸ್
ತನ್ನ ಮೇಲೆ ಎರಡು ಎಫ್ಐಆರ್ ದಾಖಲಾಗಿದೆ ಮತ್ತು ಅರಣ್ಯ ಇಲಾಖೆಯಿಂದ ನೋಟಿಸ್ ಬಂದಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. ಕೋವಿಡ್ ಸಮಯದಲ್ಲಿ ಅತ್ಯಾಚಾರ ಸಂತ್ರಸ್ತೆಯ ಭೇಟಿಗೆ ತೆರಳಿದಾಗ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ 2020ರಲ್ಲಿ ಇವರ ಮೇಲೆ ಮೊದಲ ಎಫ್ಐಆರ್ ದಾಖಲಾಗಿದೆ. ತಪ್ಪು ಸಂದೇಶ ಇರುವ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರಯ ನೀಡಿದ ದೂರಿನ ಆಧಾರದಲ್ಲಿ 2023 ರಲ್ಲಿ ಮಧ್ಯಪ್ರದೇಶದಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಿಯಾಂಕಾಗಿಂತ ಪತಿ ವಾದ್ರಾ ಹೆಚ್ಚು ಶ್ರೀಮಂತರಾಗಿದ್ದಾರೆ. ವಾದ್ರಾ ಬಳಿ 53 ಲಕ್ಷ ರೂ. ಮೌಲ್ಯದ ಲ್ಯಾಂಡ್ ಕ್ರೂಸರ್, 1.5 ಲಕ್ಷ ರೂ.ಮೌಲ್ಯದ ಮಿನಿ ಕೂಪರ್ ಮತ್ತು 4.22 ಲಕ್ಷ ರೂಪಾಯಿ ಮೌಲ್ಯದ ಸುಜುಕಿ ಮೋಟಾರ್ ಸೈಕಲ್ ಇದೆ. ವಾದ್ರಾ ಅವರು ವಿವಿಧ ಕಂಪನಿಗಳಲ್ಲಿ ಪಾಲುದಾರರಾಗಿ ಸುಮಾರು 35.5 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.
ಪ್ರಸ್ತುತ ಮಾರುಕಟ್ಟೆ ಮೌಲ್ಯದ ಪ್ರಕಾರ 27.64 ಕೋಟಿ ಮೌಲ್ಯದ ಗುರುಗ್ರಾಮ್ನಲ್ಲಿ ವಾದ್ರಾ ವಿವಿಧ ಆಸ್ತಿಗಳನ್ನು ಹೊಂದಿದ್ದಾರೆ. ಈ ಆಸ್ತಿಗಳನ್ನು 2.78 ಕೋಟಿ ರೂ, ನೀಡಿ ಖರೀದಿಸಿದ್ದು ಅಭಿವೃದ್ಧಿಯ ಮೂಲಕ 3.62 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಸಲ್ಲಿಸಿದ ಚುನಾವಣಾ ಅಫಿಡವಿಟ್ ಪ್ರಕಾರ ವಾದ್ರಾ ಅವರು ಸುಮಾರು 10 ಕೋಟಿ ರೂ. ಸಾಲವನ್ನು ಹೊಂದಿದ್ದಾರೆ.