ಮುಂಬರುವ IPL ಗೂ ಮುನ್ನ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬರಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಹೀಗಾಗಿ ರಿಷಬ್ ಖರೀದಿಸಲು ಉಳಿದ ಪ್ರಾಂಚೈಸಿಗಳು ಮುಗಿ ಬೀಳುವ ಸಾಧ್ಯತೆ ಇದೆ.
ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕರ್ನಾಟಕದ ಹಲವು ನಿಲ್ದಾಣಗಳಿಗೆ ವಿಶೇಷ ರೈಲು!
ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲು ಮುಂದಾಗಿರುವುದೇಕೆ ಎಂಬುದೇ ಪ್ರಶ್ನೆ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಕೆಲ ಫ್ರಾಂಚೈಸಿಗಳಿಂದ ಪಂತ್ ಬಂದಿರುವ ಬಿಗ್ ಆಫರ್ಗಳು. ಹೀಗೆ ಎಡಗೈ ದಾಂಡಿಗನ ಮೇಲೆ ಕಣ್ಣಿಟ್ಟಿರುವ ಫ್ರಾಂಚೈಸಿಗಳ ಪೈಕಿ ಅಗ್ರಸ್ಥಾನದಲ್ಲಿರುವುದ ಚೆನ್ನೈ ಸೂಪರ್ ಕಿಂಗ್ಸ್ ಎಂಬುದು ವಿಶೇಷ.
ಐಪಿಎಲ್ ಮೆಗಾ ಹರಾಜಿನ ಸುದ್ದಿಯ ಬೆನ್ನಲ್ಲೇ ರಿಷಭ್ ಪಂತ್ ಜೊತೆ ಚೆನ್ನೈ ಸೂಪರ್ ಕಿಂಗ್ಸ್ ಮಾತುಕತೆ ನಡೆಸಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿಯಾಗಿ ಅವರನ್ನು ನೇಮಿಸಿಕೊಳ್ಳಲು ಸಿಎಸ್ಕೆ ಆಸಕ್ತಿವಹಿಸಿದ್ದು, ಹೀಗಾಗಿ ಪಂತ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು.
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬರುತ್ತಿರುವ ಸುದ್ದಿಯ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಾರ್ಗೆಟ್ ಲಿಸ್ಟ್ನಲ್ಲೂ ರಿಷಭ್ ಪಂತ್ ಹೆಸರಿಸಿದೆ ಎಂದು ಸುದ್ದಿಯಾಗಿದೆ. ಅಂದರೆ ಇಲ್ಲಿ ಸಿಎಸ್ಕೆ ಜೊತೆ ಆರ್ಸಿಬಿ ಕೂಡ ರಿಷಭ್ ಪಂತ್ ಮೇಲೆ ಕಣ್ಣಿಟ್ಟಿರುವುದು ಖಚಿತವಾಗಿದೆ.
ಇದರ ನಡುವೆ ಪಂಜಾಬ್ ಕಿಂಗ್ಸ್ ಕೂಡ ಹೊಸ ನಾಯಕನ ಹುಡುಕಾಟಕ್ಕೆ ಇಳಿದಿದೆ. ಇಲ್ಲಿ ಪಂಜಾಬ್ ತಂಡದ ನೂತನ ಕೋಚ್ ಆಗಿ ರಿಕಿ ಪಾಂಟಿಂಗ್ ನೇಮಕವಾಗಿದ್ದಾರೆ. ಈ ಹಿಂದೆ ಪಾಂಟಿಂಗ್ ಕೋಚಿಂಗ್ನಲ್ಲೇ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು ಎಂಬುದು ಉಲ್ಲೇಖಾರ್ಹ. ಅಂದರೆ ಪಂತ್ ಮೆಗಾ ಹರಾಜಿಗೆ ಬರುವುದನ್ನು ಪಂಜಾಬ್ ಕಿಂಗ್ಸ್ ಕೂಡ ಕಾಯುತ್ತಿರುವುದು ಸುಳ್ಳಲ್ಲ.