ನೂರಾರು ಕೋಟಿ ರೂಪಾಯಿ ಮೋಸ ಮಾಡಿದ ಆರೋಪಡದಿ ಟಾಲಿವುಡ್ ನಿರ್ಮಾಪಕನನ್ನು ಬಂಧಿಸಲಾಗಿದೆ.
IND vs NZ: ನ್ಯೂಝಿಲೆಂಡ್ ವಿರುದ್ಧ 2ನೇ ಟೆಸ್ಟ್ ಗೆ ಟೀಮ್ ಇಂಡಿಯಾ ರೆಡಿ!
ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ಮಾಪಕ ಬುರುಗಪಲ್ಲಿ ಶಿವ ರಾಮ ಕೃಷ್ಣ ಅನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಎರಡು ದಶಕಗಳ ಕಾಲ ನಡೆದ ಪ್ರಕರಣದಲ್ಲಿ ಶಿವ ರಾಮ ಕೃಷ್ಣ ಅವರಿಗೆ ತೀವ್ರ ಹಿನ್ನಡೆ ಆಗಿದೆ.
ಸುಮಾರು 80 ಎಕರೆ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ತನ್ನದು ಮಾಡಿಕೊಂಡಿದ್ದರು ಎಂಬ ಆರೋಪ ರಾಮ ಕೃಷ್ಣ ಅವರ ಮೇಲಿತ್ತು. ಹೈದರಾಬಾದ್ ಬಳಿಯಲ್ಲಿಯೇ ಈ 80 ಎಕರೆ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಜಮೀನಿನ ಈಗಿನ ಮೌಲ್ಯ ಸುಮಾರು 500 ಕೋಟಿಗೂ ಹೆಚ್ಚು ಎನ್ನಲಾಗುತ್ತದೆ. 2003 ರಲ್ಲಿಯೇ ಈ ಹಗರಣ ಬೆಳಕಿಗೆ ಬಂದು, ಆಗಿನ ಅವಿಭಜಿತ ಆಂಧ್ರ ಪ್ರದೇಶ ಸರ್ಕಾರ ಬುರುಗಪಲ್ಲಿ ಶಿವ ರಾಮ ಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿತ್ತು.
ಪುರಾತತ್ವ ಇಲಾಖೆಯ ಹಿರಿಯ ಸಹಾಯಕ ಕೊತ್ತಿ ಚಂದ್ರಶೇಖರ್ ಎಂಬುವರ ನೆರವು ಪಡೆದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಬುರುಗಪಲ್ಲಿ ಶಿವ ರಾಮ ಕೃಷ್ಣ ಆ ನಂತರ ಬಿಲ್ಡರ್ ಮುರುಗ ಲಿಂಗಂ ಸಹಾಯ ಪಡೆದು ಅಲ್ಲಿ ನಿವೇಶನ ನಿರ್ಮಾಣ ಹಾಗೂ ಮಾರಾಟಕ್ಕೆ ಮುಂದಾಗಿದ್ದರು. ಬಿಲ್ಡರ್ ಮುರುಗ ಲಿಂಗಂ ಸಹ, ನಕಲಿ ದಾಖಲೆ ಸೃಷ್ಟಿಸಲು ಶಿವ ರಾಮ ಕೃಷ್ಣಗೆ ಸಹಾಯ ಮಾಡಿದ್ದರು. ಈಗ ಈ ಇಬ್ಬರನ್ನೂ ಸಹ ಬಂಧಿಸಲಾಗಿದೆ.
2003 ರಲ್ಲಿ ಅವಿಭಜಿತ ಆಂಧ್ರ ಪ್ರದೇಶ ಸರ್ಕಾರವು ಶಿವ ರಾಮ ಕೃಷ್ಣ ಅವರ ಮಾಲೀಕತ್ವವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಹೂಡಿತ್ತು, ಹೈಕೋರ್ಟ್ನಲ್ಲಿ ಶಿವ ರಾಮ ಕೃಷ್ಣಗೆ ಹಿನ್ನಡೆ ಆಗಿತ್ತು, ಬಳಿಕ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆದು ಶಿವ ರಾಮ ಕೃಷ್ಣಗೆ ಸುಪ್ರೀಂಕೋರ್ಟ್ನಲ್ಲಿಯೂ ಹಿನ್ನಡೆ ಆಗಿರುವುದಲ್ಲದೆ, ಶಿವ ರಾಮ ಕೃಷ್ಣ ಮತ್ತು ಸಂಗಡಿಗರು ಭಾರಿ ಮೌಲ್ಯದ ಜಮೀನನ್ನು ನಕಲಿ ದಾಖಲೆ ಬಳಸಿ ಅಕ್ರಮವಾಗಿ ವಶಕ್ಕೆ ಪಡೆದಿರುವುದು ಸಾಬೀತಾಗಿದೆ. ಪ್ರಕರಣದಲ್ಲಿ ಶಿವ ರಾಮ ಕೃಷ್ಣಗೆ ಶಿಕ್ಷೆ ವಿಧಿಸಲಾಗಿದ್ದು, ಇದೇ ಕಾರಣಕ್ಕೆ ಹೈದರಾಬಾದ್ನ ಒಸ್ವಾಲ್ ಯೂನಿವರ್ಸಿಟಿ ಪೊಲೀಸರು ಶಿವ ರಾಮ ಕೃಷ್ಣ ಹಾಗೂ ಇತರರನ್ನು ಬಂಧಿಸಿದ್ದಾರೆ.