ಬೆಟ್ಟದ ನೆಲ್ಲಿಕಾಯಿಯ ರುಚಿಯನ್ನು ಬಲ್ಲದವರು ಯಾರೂ ಇಲ್ಲ. ಆರ್ಯುವೇದ ವಿಜ್ಞಾನದಲ್ಲಂತೂ ನೆಲ್ಲಿಕಾಯಿಗೆ ಬಹಳ ಮಹತ್ವವಿದೆ. ಶತ ಶತಮಾನಗಳಿಂದಲೂ ನೆಲ್ಲಿಕಾಯಿಗಳನ್ನು ಔಷಧಿಯ ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ.ವಿಟಮಿನ್ ಸಿ ಹಾಗೂ ಆಂಟಿಆಕ್ಸಿಡಂಟ್ ಗುಣಗಳು ಮತ್ತು ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ನೆಲ್ಲಿಕಾಯಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ , ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ರೋಗ ಶಮನಕಾರಿ ಗುಣವಿರುವ ಬೆಟ್ಟದ ನೆಲ್ಲಿಕಾಯಿಯ ಮನೆಮದ್ದು:
- ನೆಲ್ಲಿಕಾಯಿ ಪುಡಿ ಎರಡು ಚಮಚ, ಜೀರಿಗೆ ಪುಡಿ ಅರ್ಧ ಚಮಚ ಮತ್ತು ಕಲ್ಲು ಸಕ್ಕರೆ ಇವುಗಳನ್ನು ಮಿಶ್ರ ಮಾಡಿ ದಿನಕ್ಕೆರಡು ಬಾರಿ ಸೇವಿಸಿದರೆ ಅಸಿಡಿಟಿ ಸಮಸ್ಯೆಯೂ ನಿವಾರಣೆಯಾಗುತ್ತದೆ.
- ನೆಲ್ಲಿಕಾಯಿ ಬೀಜದ ಕಷಾಯ ತಯಾರಿಸಿ ಆರಿಸಿ ಶೋಧಿಸಿ ಕಣ್ಣಿಗೆ ಎರಡು ಹನಿ ಹಾಕಿದರೆದರೆ ಕಣ್ಣು ನೋವು ಗುಣಮುಖವಾಗುತ್ತದೆ.
- ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪದಲ್ಲಿ ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಕಣ್ಣು ನೋವಿಗೆ ಪರಿಣಾಮಕಾರಿಯಾಗಿದೆ.
- ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಅಕ್ಕಿ ತೊಳೆದ ನೀರಿನಲ್ಲಿ ಕಲಸಿ ದಿನಕ್ಕೆರಡು ಬಾರಿ ಸೇವಿಸಿದರೆ ಬಿಳಿ ಮುಟ್ಟು ನಿವಾರಣೆಯಾಗುತ್ತದೆ.
- ನಾಲ್ಕು ಚಮಚ ನೆಲ್ಲಿಕಾಯಿ ರಸಕ್ಕೆ ಒಂದು ಚಮಚ ಅಶ್ವಗಂಧ ಪುಡಿ ಒಂದು ಚಮಚ ಜೇನುತುಪ್ಪ ಅಥವಾ ಅರ್ಧ ಚಮಚ ತುಪ್ಪ ಸೇರಿಸಿ ಸೇವಿಸಿ ನಂತರ ಹಾಲು ಕುಡಿದರೆರೆ ಕಣ್ಣು ನೋವಿನ ಸಮಸ್ಯೆಯೂ ಶಮನವಾಗುತ್ತದೆ.
- ನೆಲ ನೆಲ್ಲಿಯನ್ನು ಬಾಯಿಗೆ ಹಾಕಿ ಅಗಿದು, ಬಿಸಿನೀರಿನಿಂದ ಬಾಯಿ ಮುಕ್ಕಳಿಸಿದರೆ ಹಲ್ಲುನೋವು ಕಡಿಮೆಯಾಗುತ್ತದೆ.
- ನೆಲ್ಲಿಕಾಯಿ ರಸ ಮತ್ತು ಜೀರಿಗೆ ಪುಡಿಯನ್ನು ಮಜ್ಜಿಗೆಯಲ್ಲಿ ಬೆರೆಸಿ, ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಗುಣಮುಖವಾಗುತ್ತದೆ.
- ಉರಿಮೂತ್ರ ಸಮಸ್ಯೆಯಿರುವವರು ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಮಿಶ್ರಣ ಮಾಡಿ, ಬೆಳಗ್ಗಿನ ಹೊತ್ತು ಮೂರು ದಿನಗಳ ಕಾಲ ಸೇವಿಸಿದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
- ನೆಲ್ಲಿಕಾಯಿ ಪುಡಿಯನ್ನು ಮಜ್ಜಿಗೆಯಲ್ಲಿ ಕಲಸಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆಯು ವಾಸಿಯಾಗುತ್ತದೆ.