ಲಕ್ನೋ:- ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಹಿನ್ನೆಲೆ, ಕಾರಿನಲ್ಲಿದ್ದ 12.5 ಕೆಜಿ ಗೋಲ್ಡ್ ಸೀಜ್ ಮಾಡಲಾಗಿದೆ.
ವಾಂತಿ-ಭೇದಿಯಿಂದ ನವಜಾತ ಶಿಶು ಸೇರಿ ಐವರು ಸಾವು: ಕಲುಷಿತ ನೀರು ಸೇವಿಸಿರೋ ಶಂಕೆ!
ಮಾಂಟ್ ಟೋಲ್ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಕಾರಿನಿಂದ ಸುಮಾರು 12.5 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ದೆಹಲಿಯಿಂದ ಡಿಯೋರಿಯಾ ಕಡೆಗೆ ಚಿನ್ನವನ್ನು ಸಾಗಿಸುತ್ತಿದ್ದರು. ಚಿನ್ನ ಸಾಗಣೆಯ ಸಂಬಂಧ ಯಾವುದೇ ದಾಖಲೆ ಇರಲಿಲ್ಲ. ಆದ್ದರಿಂದ ಚಿನ್ನವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಉತ್ತರಪ್ರದೇಶದ ಮಥುರಾದಲ್ಲಿ ಘಟನೆ ಜರುಗಿದೆ. ಮಥುರಾ ಪೊಲೀಸರು ಯಮುನಾ ಎಕ್ಸ್ಪ್ರೆಸ್ ವೇಯಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಸೂಕ್ತ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 12.5 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.