ವಿಜಯಪುರ:- ರೇಂಜರ್ ಸ್ವಿಂಗ್ನಿಂದ ಬಿದ್ದು ಯುವತಿ ಸಾವನ್ನಪ್ಪಿದ ಘಟನೆ ನಗರದ ನವಭಾಗ್ ರಸ್ತೆಯಲ್ಲಿರೋ ಫಿಶ್ ಟನಲ್ ಎಕ್ಪೋದಲ್ಲಿ ಜರುಗಿದೆ.
CP ಯೋಗೇಶ್ವರ್ ಕಾಂಗ್ರೆಸ್ ಗೆ ಬಂದ್ರೆ ಅದ್ದೂರಿ ಸ್ವಾಗತ: ಸಂತೋಷ್ ಲಾಡ್!
ನಿಖಿತಾ ಬಿರಾದಾರ್ ಮೃತ ಯುವತಿ. ರೇಂಜರ್ ಸ್ವಿಂಗ್ನಲ್ಲಿ ಕುಳಿತಾಗಲೇ ನಿಖಿತಾಗೆ ಹಾಕಿದ್ದ ಬೆಲ್ಟ್ ಸರಿಯಾಗಿದೆಯಾ ಎಂದು ಆಕೆಯ ತಾಯಿ ಆಪರೇಟರ್ಗೆ ಪ್ರಶ್ನಿಸಿದ್ದಳು. ಅದಕ್ಕೆ ಆತ ಎಲ್ಲಾ ಓಕೆ ಎಂದಿದ್ದ.
ಅಲ್ಲದೇ ಸ್ವಲ್ಪ ಸಮಯದ ಬಳಿಕ ಸಾಕು ನಿಲ್ಲಿಸಿ ನಿಲ್ಲಿಸಿ ಎಂದು ಆಪರೇಟರ್ ಬಳಿ ನಿಖಿತಾ ತಾಯಿ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಆದ್ರೆ, ಆಪರೇಟರ್ ಅದ್ಯಾವುದನ್ನೂ ಕೇಳಿಸಿಕೊಳ್ಳದೇ ಸುಮ್ಮನಾಗಿದ್ದಾನೆ. ಆಗ ನಿಖಿತಾಗೆ ಹಾಕಿದ್ದ ಬೆಲ್ಟ್ ಕಟ್ ಆಗಿ ಆಕೆ ಮೇಲಿಂದ ಕೆಳಗೆ ಬಿದ್ದಿದ್ದಾಳೆ.
ಜಿಲ್ಲೆಯ ನವಭಾಗ್ ರಸ್ತೆಯ ಫಿಶ್ ಟನಲ್ ಎಕ್ಸ್ಪೋದಲ್ಲಿ ತಲೆ ಕೆಲಗಾಗಿ ತಿರುಗಿಸೋ ಸುನಾಮಿಯಲ್ಲಿ ಕುಳಿತಿದ್ದ ಯುವತಿ ಕಳಪೆ ಬೆಲ್ಟ್ ಹಾಕಿದ್ದ ಪರಿಣಾಮ ಕೆಳಗೆ ಬಿದ್ದು ಸಾವಿನ ಮನೆ ಸೇರಿದ್ದಾಳೆ.