ವಿಮಾನದಲ್ಲಿ ಪ್ರಯಾಣಿಸುವವರು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಾವು ಬಸ್, ಕಾರು, ರೈಲಿನಲ್ಲಾದರೆ ನಮ್ಮ ದಿನಬಳಕೆಯ ವಸ್ತುಗಳನ್ನು ಕೊಂಡೊಯ್ಯುತ್ತೇವೆ. ಆದರೆ ವಿಮಾನದಲ್ಲಿ ಹಾಗಲ್ಲ, ನಿರ್ದಿಷ್ಟ ವಸ್ತುಗಳನ್ನು ಒಯ್ಯಬಾರದು ಎಂಬ ನಿಯಮವೇ ಇದೆ.
ರಸ್ತೆ ಉದ್ದಕ್ಕೂ ಗುಂಡಿಗಳದ್ದೆ ದರ್ಬಾರ್: ಅಧಿಕಾರಿಗಳ ವಿರುದ್ದ ಸಾರ್ವಜನಿಕರಿಂದ ಪ್ರತಿಭಟನೆ.
ವಿಮಾನದೊಳಗೆ ನಾವು ಎಲ್ಲವನ್ನೂ ಒಯ್ಯುವಂತಿಲ್ಲ. ವಿಮಾನದ ಕ್ಯಾಬಿನ್ ಒಳಗೆ ಕಟ್ಟುನಿಟ್ಟಾಗಿ ನಿಷೇಧಿಸಲಾದ ಕೆಲವೊಂದು ವಸ್ತುಗಳಿದ್ದು, ಅವುಗಳನ್ನು ವಿಮಾನ ಪ್ರಯಾಣ ಸಮಯದಲ್ಲಿ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಬಹಳಷ್ಟು ಪ್ರಯಾಣಿಕರಿಗೆ ವಿಮಾನದ ಕ್ಯಾಬಿನ್ನೊಳಗೆ ನಿಖರವಾಗಿ ಏನನ್ನು ಸಾಗಿಸಬಹುದು ಮತ್ತು ಯಾವುದನ್ನು ಸಾಗಿಸಬಾರದು ಎಂದು ತಿಳಿದಿಲ್ಲ. ಆ ವಸ್ತುಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ತೆಂಗಿನಕಾಯಿಯನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ತೆಂಗಿನಕಾಯಿಯನ್ನು ಹೆಚ್ಚಾಗಿ ದೇವರ ಪೂಜೆಗೆ ಬಳಸುತ್ತಾರೆ. ಹಿಂದುಗಳಂತೂ ಪ್ರತಿ ಕಾರ್ಯಕ್ರಮದಲ್ಲೂ ಇದನ್ನು ಬಳಸುತ್ತಾರೆ. ವಿಮಾನಗಳಲ್ಲಿ ತೆಂಗಿನಕಾಯಿ ಒಯ್ಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಕ್ಕೆ ಬಲವಾದ ಕಾರಣವೂ ಇದೆ. ಅದೇನೆಂದು ನಾವೀಗ ತಿಳಿಯೋಣ.
ತೆಂಗಿನಕಾಯಿ ಸ್ವಾಭಾವಿಕವಾಗಿ ಉರಿಯುವ ಸ್ವಭಾವವನ್ನು ಹೊಂದಿದೆ. ಹಾಗಾಗಿ ಅಪಘಾತ ಸಂಭವಿಸಬಹುದು ಎನ್ನುವ ಕಾರಣಕ್ಕೆ ವಿಮಾನದಲ್ಲಿ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಸಂಪೂರ್ಣ ತೆಂಗಿನಕಾಯಿಯನ್ನು ಸಹ ವಿಮಾನಗಳಲ್ಲಿ ಅನುಮತಿಸಲಾಗುವುದಿಲ್ಲ. ಇದಿಷ್ಟೇ ಅಲ್ಲದೆ ವಿಮಾನದಲ್ಲಿ ಅಮಲು ಪದಾರ್ಥಗಳನ್ನು ಕೊಂಡೊಯ್ಯಬಾರದು. ಮದ್ಯವನ್ನು ವಿಮಾನದಲ್ಲೇ ನೀಡಲಾಗುತ್ತದೆ. ಇವುಗಳೊಂದಿಗೆ, ಇತರ ಕೆಲವು ವಸ್ತುಗಳನ್ನು ಸಹ ಪ್ರಯಾಣದ ಸಮಯದಲ್ಲಿ ಸಾಗಿಸುವುದನ್ನು ನಿಷೇಧಿಸಲಾಗಿದೆ.
ಇನ್ನು ವಿಮಾನವನ್ನು ಹತ್ತುವಾಗ ನೀವು ನಿಯಮಗಳನ್ನು ನೋಡಿಕೊಳ್ಳಬೇಕು ಮತ್ತು ಅದರ ಪ್ರಕಾರ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ, ನೀವು ತೊಂದರೆಗೆ ಸಿಲುಕುತ್ತೀರಿ, ಆದ್ದರಿಂದ ತೆಂಗಿನಕಾಯಿ ತೆಗೆದುಕೊಂಡು ಹೋಗಬೇಡಿ. ಸುಡುವ ಸ್ವಭಾವದ ಕಾರಣ ತೆಂಗಿನಕಾಯಿಯನ್ನು ಅನುಮತಿಸಲಾಗುವುದಿಲ್ಲ. ಆದ್ದರಿಂದ ಈ ತಪ್ಪು ಮಾಡದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ತೊಂದರೆಗೆ ಸಿಲುಕಬೇಕಾಗುತ್ತದೆ.
ತೆಂಗಿನಕಾಯಿ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟ. ಇದು ದೇಹಕ್ಕೆ ಅಗತ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಹಾಗಾಗಿ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಲಾಭಗಳು ಸಿಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದಲ್ಲದೆ, ಇದರಲ್ಲಿರುವ ಆಯುರ್ವೇದ ಗುಣಲಕ್ಷಣಗಳು ದೀರ್ಘಕಾಲದ ಕಾಯಿಲೆಗಳನ್ನು ಶಾಶ್ವತವಾಗಿ ಸಹ ಕಡಿಮೆ ಮಾಡುತ್ತದೆ.
ತೆಂಗಿನಕಾಯಿ ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಪೂಜೆಯಿಂದ ಹಿಡಿದು ಅಡುಗೆವರೆಗೂ ತೆಂಗಿನಕಾಯಿ ಬೇಕೆ ಬೇಕು. ತೆಂಗಿನಕಾಯಿಯಲ್ಲಿ ಸಾಕಷ್ಟು ಆರೋಗ್ಯಕರ ಲಾಭಗಳಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ತೆಂಗಿಕಾಯಿ ಹಣ್ಣೋ? ಅಥವಾ ತರಕಾರಿಯೋ ಎಂದು ಕೇಳಿದರೆ ಬಹುತೇಕರಿಗೆ ತಿಳಿದಿಲ್ಲ.
ತೆಂಗಿನಕಾಯಿ ಹಣ್ಣು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅದರ ಹೆಸರಿನಲ್ಲಿ ‘ಕಾಯಿ’ ಎಂಬ ಪದವನ್ನು ಹೊಂದಿದ್ದರೂ ಸಹ ತೆಂಗಿನಕಾಯಿ ಒಂದು ಹಣ್ಣು ಹೊರತು ಕಾಯಿ ಅಥವಾ ತರಕಾರಿಯಲ್ಲ. ವಾಸ್ತವವಾಗಿ ತೆಂಗಿನಕಾಯಿಯು ಡ್ರೂಪ್ಸ್ ಎಂದು ಕರೆಯಲ್ಪಡುವ ಉಪವರ್ಗದ ಅಡಿಯಲ್ಲಿ ಬರುತ್ತದೆ. ಇದು ಗಟ್ಟಿಯಾದ ಚಿಪ್ಪಿನಿಂದ ಸುತ್ತುವರಿದ ಆಂತರಿಕ ತಿರುಳು ಮತ್ತು ಬೀಜವನ್ನು ಹೊಂದಿರುವ ಹಣ್ಣುಗಳು ಎಂದು ವ್ಯಾಖ್ಯಾನಿಸಲಾಗಿದೆ