ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಕ್ಟೋಬರ್ 15 ರಿಂದ ಈ ಕೆಲಸಗಳಿಗೆ ಅಪ್ಲೇ ಮಾಡಬಹುದಾಗಿದೆ. ಸಂಸ್ಥೆಯಲ್ಲಿ ಕೆಲಸಕ್ಕೆ ತಕ್ಕಂತೆ ವೇತನ ಶ್ರೇಣಿಯು ನಿಗದಿ ಮಾಡಲಾಗಿರುತ್ತದೆ. ಅಭ್ಯರ್ಥಿಗಳು ಪೂರ್ವ ತಯಾರಿ ಮಾಡಿಕೊಂಡ ಬಳಿಕವೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ಕೆಲಸಗಳಿಗೆ ಅರ್ಜಿ ಶುಲ್ಕ, ಸಂಬಳ, ವಿದ್ಯಾರ್ಹತೆ, ಅಂತಿಮ ದಿನಾಂಕ, ಆಯ್ಕೆ ಪ್ರಕ್ರಿಯೆ ಸೇರಿ ಮುಂತಾದ ಮಾಹಿತಿಯನ್ನು ನೀಡಲಾಗಿದೆ. ಈ ಆರ್ಟಿಕಲ್ ಅನ್ನು ಸಂಪೂರ್ಣವಾಗಿ ಗಮನಿಸಿ.
ಅಭ್ಯರ್ಥಿಗಳು ಆನ್ಲೈನ್ ಪರೀಕ್ಷೆಯಲ್ಲಿ 150 ನಿಮಿಷದಲ್ಲಿ 200 ಪ್ರಶ್ನೆಗಳಿಗೆ ಉತ್ತರಿಸಬೇಕಾಗಿರುತ್ತದೆ. ಇದಕ್ಕೆ 250 ಅಂಕಗಳನ್ನು ನಿಗದಿ ಮಾಡಲಾಗಿರುತ್ತದೆ. ಇನ್ನು ಅರ್ಜಿಗಾಗಿ ಪಾವತಿ ಮಾಡಲಾದ ಶುಲ್ಕವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡಲ್ಲ. ಈ ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಿದ ದಿನವೇ ಹಾಲ್ಟಿಕೆಟ್ ನೀಡುವ ಹಾಗೂ ಪರೀಕ್ಷೆ ದಿನಾಂಕಗಳನ್ನ ನೀಡಲಾಗಿರುತ್ತದೆ.
ಉದ್ಯೋಗಗಳ ಹೆಸರು
ಜೆನೆರಲ್ಲಿಸ್ಟ್ = 100
ರಿಸ್ಕ್ ಮ್ಯಾನೇಜ್ಮೆಂಟ್= 10
ಫೈನಾನ್ಸ್ & ಇನ್ವೆಸ್ಟ್ಮೆಂಟ್= 20
ಇಂಜಿನಿಯರ್= 20
ಕೆಮಿಕಲ್, ಮೆಕಾಟ್ರಾನಿಕ್ಸ್ ಇಂಜಿನಿಯರ್= 10
ಡಾಟಾ ಅನಾಲಿಟಿಕಲ್ ಸ್ಪೆಷಲಿಸ್ಟ್= 20
ಲೀಗಲ್= 20
ಒಟ್ಟು ಉದ್ಯೋಗಗಳು= 200
ಉದ್ಯೋಗದ ವರ್ಗ= ಬ್ಯಾಂಕ್ ಜಾಬ್ಸ್
ಮಾಸಿಕ ಸಂಬಳ= 88,000 ರೂಪಾಯಿಗಳು
ಆಯ್ಕೆ ಪ್ರಕ್ರಿಯೆ
ಆನ್ಲೈನ್ ಟೆಸ್ಟ್
ಸಂದರ್ಶನ
ಪ್ರಮುಖ ದಿನಾಂಕಗಳು
ಅಪ್ಲೇ ಮಾಡಲು ಆರಂಭದ ದಿನಾಂಕ- ಅಕ್ಟೋಬರ್ 15, 2024
ಅಪ್ಲೇ ಮಾಡಲು ಕೊನೆಯ ದಿನಾಂಕ- ನವೆಂಬರ್ 05, 2024
ಪರೀಕ್ಷೆ ಹಾಲ್ಟಿಕೆಟ್ ನೀಡುವ ದಿನಾಂಕ- ಡಿಸೆಂಬರ್ ಮೊದಲ ವಾರ (2024)
ಪರೀಕ್ಷೆಯ ದಿನಾಂಕ ಯಾವಾಗ- 14 ಡಿಸೆಂಬರ್ 2024
ಅರ್ಜಿ ಶುಲ್ಕ ಎಷ್ಟು ಇದೆ..?
ಜನರಲ್, ಒಬಿಸಿ, ಸಾಮಾನ್ಯ ಅಭ್ಯರ್ಥಿಗಳು- 1,000 ರೂಪಾಯಿ
ಎಸ್ಸಿ, ಎಸ್ಟಿ, ವಿಶೇಷ ಚೇತನ ಅಭ್ಯರ್ಥಿಗಳು- 250 ರೂಪಾಯಿ
ವಯೋಮಿತಿ
21 ರಿಂದ 30 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ
ವಿದ್ಯಾರ್ಹತೆ:-
ಪದವಿ, ಸ್ನಾತಕೋತ್ತರ ಪದವಿ, ಬಿಇ, ಬಿಟೆಕ್, ಎಂಇ, ಎಂಟೆಕ್, ಬಿಕಾಮ್, ಎಂಕಾಮ್, ಸಿಎ, ಕಾನೂನು ಪದ