ನವದೆಹಲಿ: ನಾನು ಅವರ ಹಾಸಿಗೆಯ ಮೇಲೆ ಕುಳಿತಿದ್ದೆ ಎಂದು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಕುರಿತು ಮೇಲೆ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. 2016ರ ರಿಯೊ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತೀಯ ಕುಸ್ತಿಪಟು ಸಾಕ್ಷಿ ಮಲಿಕ್ ತಮ್ಮ ವೃತ್ತಿಜೀವನದ ಕೆಲವು ಘಟನೆಗಳ ಬಗ್ಗೆ ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ.
ಕೆಲವು ತಿಂಗಳ ಹಿಂದೆಯಷ್ಟೇ ಸಾಕ್ಷಿ ಮಲಿಕ್ ಕುಸ್ತಿಯನ್ನು ತೊರೆದಿದ್ದರು. 2012ರ ಅಲ್ಮಾಟಿ (ಕಝಾಕಿಸ್ತಾನ್)ನಲ್ಲಿ ನಡೆದ ಏಷ್ಯನ್ ಜೂನಿಯರ್ ಚಾಂಪಿಯನ್ಶಿಪ್ ವೇಳೆ ಆಗಿನ ಕುಸ್ತಿ ಸಂಸ್ಥೆಯ ಮುಖ್ಯಸ್ಥ ಬ್ರಿಜ್ ಭೂಷಣ್ ಹೊಟೇಲ್ ಕೋಣೆಯೊಂದರಲ್ಲಿ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದರು ಎಂದು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
ರೈತರೇ ಗಮನಿಸಿ.. ಈ ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ಅಕೌಂಟ್ ಸೇರಲ್ಲ ಪಿಎಂ ಕಿಸಾನ್ ಹಣ!
ತನ್ನ ಪೋಷಕರೊಂದಿಗೆ ಮಾತನಾಡಲು ನನ್ನನ್ನು ಬ್ರಿಜ್ ಭೂಷಣ್ ಹೊಟೇಲ್ ಕೋಣೆಯೊಂದರೊಳಗೆ ಕಳುಹಿಸಿದರು. ಅದರ ನಂತರ ನಡೆದದ್ದು ನನ್ನ ಜೀವನದ ಅತ್ಯಂತ ಆಘಾತಕಾರಿ ಘಟನೆಗಳಲ್ಲಿ ಒಂದು ಎಂದು ಹೇಳಿದ್ದಾರೆ.
ನಾನು ಒಳಗೆ ಹೋಗಿ ನನ್ನ ಮನೆಯವರೊಂದಿಗೆ ಮಾತನಾಡುತ್ತಿದ್ದೆ. ಏನಾದರೂ ಕೆಟ್ಟದ್ದು ಸಂಭವಿಸಬಹುದು ಎಂದುಕೊಂಡಿದ್ದೆ. ಅಷ್ಟರಲ್ಲೇ ಅವರೂ ಕೂಡ ಒಳಗೆ ಬಂದರು. ನಾನು ಕಾಲ್ ಕಟ್ ಮಾಡಿದ ತಕ್ಷಣ ಅವರು ಕಿರುಕುಳ ನೀಡಲು ಪ್ರಯತ್ನಿಸಿದರು. ಅವನನ್ನು ತಳ್ಳಿ ಅಳಲು ಪ್ರಾರಂಭಿಸಿದೆ. ನನ್ನಿಂದ ಅವರು ಏನನ್ನು ಬಯಸಿದ್ದರೋ,
ಅದು ನನ್ನಿಂದ ಆಗುವುದಿಲ್ಲ ಎಂದು ತಿಳಿದಾಗ ಅವರೇ ನನ್ನಿಂದ ದೂರ ಸರಿದರು. ಬಳಿಕ ನಾನು ಅಲ್ಲಿಂದ ನನ್ನ ಕೋಣೆಗೆ ಹೋದೆ. ಆದರೆ ಈ ರೀತಿ ಅನುಭವಿಸಿದ್ದು ಮೊದಲಲ್ಲ. ಇದಕ್ಕೂ ಮುಂಚೆ ಟ್ಯೂಷನ್ ಶಿಕ್ಷಕರೊಬ್ಬರು ನನ್ನೊಂದಿಗೆ ಬಾಲ್ಯದಲ್ಲಿರುವಾಗ ಅನುಚಿತವಾಗಿ ವರ್ತಿಸಿದ್ದರು ಎಂದು ಹೇಳಿಕೊಂಡಿದ್ದಾರೆ.