ದಾಸರಹಳ್ಳಿ: ಸತತವಾಗಿ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಂಗಳೂರು ನಗರದಲ್ಲಿ ಹಾನಿಯಾಗಿ ಜನರು ಪರದಾಡುವಂತಾಗಿದೆ. ಹಾಗೆ ಬೆಂಗಳೂರು ಹೊರವಲಯ ದಾಸರಹಳ್ಳಿ ಕ್ಷೇತ್ರದಲ್ಲಿ ಹೆಚ್ಚು ಮಳೆಯಾಗಿ ನಾಲ್ಕು ಬಾರಿ ಚಿಕ್ಕಬಾಣಾವಾರ ಮಾರುತಿ ಬಡಾವಣೆ ಹಾಗೂ ದ್ವಾರಕನಗರ ಕಾವೇರಿ ಲೇಔಟ್ ಸಾಕಷ್ಟು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸಾಕಷ್ಟು ಅನಾಹುತ ಉಂಟಾಗಿದೆ.
ರಾತ್ರಿ ಸುರಿದ ಧಾರಕಾರ ಮಳೆಯಿಂದಾಗಿ ಅಬ್ಬಿಗೆರೆ ಕೆರೆ ತುಂಬಿ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಕೊಡಿ ಬಿದ್ದ ಹಿನ್ನಲೆ ರಸ್ತೆ ಕುಸಿದು ಬಿದ್ದಿದ್ದು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇತ್ತ ಅಬ್ಬಿಗೆರೆಯಿಂದ ನಿಸರ್ಗ ಲೇಔಟ್ ಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು ರಸ್ತೆ ಕುಸಿದಿದೆ ಚಿಕ್ಕಬಾಣಾವಾರದ ಮಾರುತಿನಗರ ಮುಖ್ಯರಸ್ತೆ ಸಂಪೂರ್ಣ ಜಲಾವೃತವಾಗಿ
ಶಾಲಾ ಕಾಲೇಜು ಕೆಲಸಕ್ಕೆ ಹೋಗುವವರು ಪರದಾಡುವಂತಾಗಿದೆ.
ಇತ್ತ ವಾಹನ ಸವಾರರು ಗೋಳು ಹೇಳತಿರಾದಾಗಿದ್ದು
ಚಿಕ್ಕಬಾಣಾವಾರ ಪುರಸಭೆ ಅಧಿಕಾರಿಗಳು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ. ಇನ್ನೂ ಹೆಚ್ಚಿನ ಮಳೆಯಾದ ಇನ್ನಲೆ ಸಾಕಷ್ಟು ಅನಾಹುತಕ್ಕೆ ಕಾರಣವಾಗಿದ್ದು ಮತ್ತೆ ಇಂದು ಕೂಡ ಮಳೆ ಪ್ರಮಾಣ ಇದ್ದು ಜನರ ನಿದ್ರೆ ಕೆಡಿಸಿದ್ದಾನೆ ವರುಣ ದೇವ. ಮತ್ತೆ ಮಳೆ ಬಂದು ಅಂದರೆ ಇನ್ನೂ ಸಾಕಷ್ಟು ಅನಾಹುತ ಸಂಭವಿಸುವಂತಿದೆ.ಮಾರುತಿನಗರ ಮುಖ್ಯರಸ್ತೆಯಲ್ಲಿ ನೀರು ನಿಂತಿದ್ದು ಶಾಲೆಗೆ ಹೋಗುವ ಮಕ್ಕಳಿಗೆ ಕೆಲಸಕ್ಕೆಂದು ತೆರಳುವ ಕೆಲಸಗಾರರಿಗೆ ಸಾಕಷ್ಟು ತೊಂದರೆಯಾಯಿತು.ವಾಹನಗಳಿಗೆ ನೀರು ನುಗ್ಗಿ ಕೆಲವು ವಾಹನಗಳು ಕೆಟ್ಟು ನಿಂತವು.
ಒಟ್ಟಿನಲ್ಲಿ ಮಾರುತಿನಗರ ದ್ವಾರಕನಗರ ಜನರ ಕಷ್ಟ ಹೇಳತೀರಾದಾಗಿದೆ.ಇಂದು ಮಳೆಯಾದರೆ ಸಾಕಷ್ಟು ಅನಾಹುತ ಸಂಭವಿಸುವ ಲಕ್ಷಣಗಳು ಎದ್ದುಕಾಣುತ್ತಿದೆ .ಚಿಕ್ಕಬಾಣಾವಾರ ಪುರಸಭೆ ಅಧಿಕಾರಿಗಳು ಸ್ಥಳದಲ್ಲೆ ಮೊಕ್ಕಾಂ ಹೂಡಿ ಕೂತಿದ್ದಾರೆ ಅದಿಕಾರಿಗಳು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ .ಮಳೆರಾಯ ಕೊಂಚ ಕಡಿಮೆಯಾದರೆ ಮುಂದಾಗುವ ಅನಾಹುತ ತಂಪಿದಾಂತಾಗುತ್ತದೆ .