ನವದೆಹಲಿ: ಅಯೋಧ್ಯೆ ವಿವಾದ ಇತ್ಯರ್ಥಪಡಿಸಲು ಕಷ್ಟಸಾಧ್ಯವಾದ ಪ್ರಕರಣವಾಗಿತ್ತು. ವಿವಾದ ಇತ್ಯರ್ಥಕ್ಕಾಗಿ ನಾನು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೆ ಎಂದು ಸಿಜೆಐ ಚಂದ್ರಚೂಡ್ ಹೇಳಿದ್ದಾರೆ. ಹುಟ್ಟೂರಾದ ಮಹಾರಾಷ್ಟ್ರದ ಕನ್ಹೆರ್ಸರ್ನಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಅಯೋಧ್ಯೆ ವಿವಾದ ಇತ್ಯರ್ಥಪಡಿಸಲು ದೇವರೆದುರು ಕುಳಿತು ಪರಿಹಾರಕ್ಕೆ ಧ್ಯಾನಿಸಿದ್ದೆ. ನಿಯಮಿತವಾಗಿ ಪ್ರಾರ್ಥನೆ ಸಲ್ಲಿಸೋದಾಗಿ ತಿಳಿಸಿದ್ದಾರೆ. ನನ್ನನ್ನು ನಂಬಿ, ನಿಮಗೆ ನಂಬಿಕೆ ಇದ್ರೆ ದೇವರು ಯಾವುದೋ ಒಂದು ವಿಧದಲ್ಲಿ ನಿಮಗೆ ದಾರಿ ತೋರಿಸುತ್ತಾನೆ ಎಂದಿದ್ದಾರೆ.
Hanuman: ಶನಿವಾರವಷ್ಟೇ ಅಲ್ಲ, ಮಂಗಳವಾರವೂ ಆಂಜನೇಯ ಆರಾಧಿಸಿ! ಬದುಕಿನ ಕಷ್ಟಗಳೆಲ್ಲಾ ದೂರಾಗುತ್ತದೆ
ಇದೀಗ ಈ ವಿಚಾರದಲ್ಲಿಯೂ ಕಾಂಗ್ರೆಸ್ ರಾಜಕೀಯ ಮಾಡಿದೆ. ಇತರೆ ವಿಷಯಗಳ ಪರಿಹಾರಕ್ಕಾಗಿಯೂ ಸಿಜೆಐ ಪ್ರಾರ್ಥನೆ ಮಾಡಿದರೆ, ಸುಪ್ರೀಂಕೋರ್ಟ್, ಹೈಕೋರ್ಟ್ಗಳಲ್ಲಿ ಜನಸಾಮಾನ್ಯರಿಗೆ ದುಡ್ಡಿಲ್ಲದೇ ನ್ಯಾಯ ಸಿಗ್ತಿತ್ತು. ಇಡಿ, ಸಿಬಿಐ, ಐಟಿಗಳ ದುರ್ಬಳಕೆಯೂ ನಿಲ್ತಿತ್ತು ಎಂದು ಕಾಂಗ್ರೆಸ್ನ (Congress) ಉದಿತ್ರಾಜ್ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದಾರೆ.
ರಾಮಜನ್ಮಭೂಮಿ ವಿವಾದ (Ram Janmabhoomi) ಸಂಬಂಧ ಐತಿಹಾಸಿಕ ತೀರ್ಪು ನೀಡಿದ ಸಾವಿಂಧಾನಿಕ ಪಂಚಪೀಠದಲ್ಲಿ ಚಂದ್ರಚೂಡ್ ಕೂಡ ಇದ್ದರು. ಇದೀಗ ರಾಮಜನ್ಮಭೂಮಿ ವಿವಾದ ಇತ್ಯರ್ಥವಾಗಿ ಅಯೋಧ್ಯೆಯಲ್ಲಿ ರಾಮಮಂದಿರವೂ ನಿರ್ಮಾಣಗೊಂಡಿದೆ. ಇದೀಗ ಸಿಜೆಐ ಮಾತಿಗೆ, ಕಾಂಗ್ರೆಸ್ನ ನಾಯಕನ ಪ್ರತಿಕ್ರಿಯೆ ಭಾರೀ ಚರ್ಚೆಗೆ ಗ್ರಾಸವಾಗಿದೆ.