ದುಬೈ: ಇದೇ ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ನ್ಯೂಜಿಲೆಂಡ್ ಮಹಿಳಾ ತಂಡ ಕೋಟಿ ಕೋಟಿ ನಗದು ಬಹುಮಾನ ಬಾಚಿಕೊಂಡಿದೆ. ಅಲ್ಲದೇ 2ನೇ ಬಾರಿಗೆ ರನ್ನರ್ ಪ್ರಶಸ್ತಿ ತನ್ನದಾಗಿಸಿಕೊಂಡ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಸಹ ನಗದು ಬಹುಮಾನ ಪಡೆದುಕೊಂಡಿದೆ.
ರತನ್ ಟಾಟಾ ನಿಧನದ ಬೆನ್ನಲ್ಲೇ ಟಾಟ್ ಗ್ರೂಪ್ಸ್ ಮಹತ್ವದ ಘೋಷಣೆ! 5 ವರ್ಷಗಳಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿ
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 32 ರನ್ಗಳ ಗೆಲುವು ಸಾಧಿಸಿದ ಕಿವೀಸ್ ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಟ್ರೋಫಿಯೊಂದಿಗೆ 19.6 ಕೋಟಿ ರೂ. (2.34 ದಶಲಕ್ಷ ಡಾಲರ್) ನಗದು ಬಹುಮಾನವನ್ನು (Prize Money) ತನ್ನದಾಗಿಸಿಕೊಂಡಿತು. ಜೊತೆಗೆ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಬರೋಬ್ಬರಿ 9.8 ಕೋಟಿ ರೂ. (1.17 ದಶಲಕ್ಷ ಡಾಲರ್) ಬಹುಮಾನ ಪಡೆದುಕೊಂಡಿತು.
ಭಾರತಕ್ಕೆ ಸಿಕ್ಕಿದ್ದೆಷ್ಟು?
2024ರ ಮಹಿಳಾ ಟಿ20 ವಿಶ್ವಕಪ್ ಆವೃತ್ತಿಯ ಬಹುಮಾನವು ವಿನ್ನರ್ ಮತ್ತು ರನ್ನರ್ ಅಪ್ಗಳಿಗೆ ಸೀಮಿತವಾಗಿರದೇ ಸೆಮಿಸ್, ಲೀಗ್ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಮೂರು ತಂಡಗಳಿಗೂ ಬಹುಮಾನ ನೀಡಲಾಗುತ್ತಿದೆ. ಸೆಮಿ ಫೈನಲ್ನಲ್ಲಿ ಸೋತು ನಿರಾಸೆ ಅನುಭವಿಸಿದ ಆಸ್ಟ್ರೇಲಿಯಾ ಮಹಿಳಾ ತಂಡ 5.7 ಕೋಟಿ ರೂ. (6,75,000 ದಶಲಕ್ಷ ಡಾಲರ್) ಬಹುಮಾನ ಪಡೆದುಕೊಂಡಿದೆ.
ಸದ್ಯ ಗುಂಪು ಹಂತದ ಪಂದ್ಯಗಳಲ್ಲಿ ಇನ್ನೂ ರೇಟಿಂಗ್ಸ್ ನಿಗದಿಪಡಿಸಿಲ್ಲ. ಆದ್ರೆ ಲೀಗ್ ಸುತ್ತಿನ 4 ಪಂದ್ಯಗಳ ಪೈಕಿ 2 ರಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ (Team India Womens) 2.25 ಕೋಟಿ ರೂ. (2,70,000 ದಶಲಕ್ಷ ಡಾಲರ್) ಬಹುಮಾನ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಲೀಗ್ ಸುತ್ತಿನ ಮೂರು ತಂಡಗಳಿಗೂ ಒಂದೇ ಮೊತ್ತದ ಬಹುಮಾನ ನೀಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.