ಸಾಮಾನ್ಯವಾಗಿ ಎಲ್ಲರಿಗೂ ಬಿಕ್ಕಳಿಕೆ ಬರುತ್ತದೆ. ಕೆಲವರಿಗೆ ತಕ್ಷಣ ನಿಲ್ಲುತ್ತದೆ, ಆದರೆ ಇನ್ನೂ ಕೆಲವರಿಗೆ ನಿರಂತರವಾಗಿ ಬಿಕ್ಕಳಿಕೆ ಬರುತ್ತದೆ. ನೀರು ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ ಎಂಬ ಮಾತಿದೆ. ನೀರು ಕುಡಿದರೂ ಬಿಕ್ಕಳಿಕೆ ನಿಂತಿಲ್ಲ ಅಂದ್ರೆ ಹೀಗೆ ಮಾಡಿ, ತಕ್ಷಣ ನಿಲ್ಲುತ್ತೆ..
ಬಿಕ್ಕಳಿಕೆಗೆ ಸರಳ ಮನೆ ಮದ್ದುಗಳು
- ಬಿಕ್ಕಳಿಕೆ ಬಂದಾಗ ಲವಂಗವನ್ನು ಹಲ್ಲುಗಳಿಂದ ಅಗಿದು ಚಪ್ಪರಿಸುತ್ತಿದ್ದರೆ ಕಡಿಮೆಯಾಗುತ್ತದೆ.
- ಬಾಳೆಎಲೆಯ ಭಸ್ಮವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಬಿಕ್ಕಳಿಕೆ ನಿಂತು ಹೋಗುತ್ತದೆ.
- ಜೇನುತುಪ್ಪವನ್ನು ಬಾಯಿಗೆ ಹಾಕಿ ಸ್ವಲ್ಪ ಹೊತ್ತಿನವರೆಗೆ ಇಟ್ಟುಕೊಂಡು, ಆ ಬಳಿಕ ನುಂಗಿದರೆ ಕಡಿಮೆಯಾಗುತ್ತದೆ.
- ಅರ್ಧ ಲೋಟ ನೀರಿನಲ್ಲಿ ಜೇನು ತುಪ್ಪ ಬೆರೆಸಿ ಕುಡಿಯುವುದು ಈ ಬಿಕ್ಕಳಿಕೆ ನಿಲ್ಲುವುದಕ್ಕೆ ಪರಿಣಾಮಕಾರಿ ಔಷಧ.
- ಒಂದು ಚಚಮಚ ಜೇನು ಹಾಗೂ ಒಂದು ಚಮಚ ಹರಳೆಣ್ಣೆಯನ್ನು ಬೆರೆಸಿ ಕುಡಿಯಬೇಕು. ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯುವುದರಿಂದ ಪದೇ ಪದೇ ಕಾಡುವ ಬಿಕ್ಕಳಿಕೆಯಿಂದ ಮುಕ್ತಿ ಹೊಂದಬಹುದು.
- ಬಿಕ್ಕಳಿಕೆ ಬಂದ ತಕ್ಷಣವೇ ತಣ್ಣನೆಯ ನೀರನ್ನು ಕುಡಿದರೆ ನಿಲ್ಲುತ್ತದೆ.
- ಒಂದು ಚಮಚ ಪೀನಟ್ ಬಟರ್ ಅನ್ನು ಬಾಯಿಗೆ ಹಾಕಿ ಸ್ವಲ್ಪ ಹೊತ್ತಿನ ಬಳಿಕ ನುಂಗುವುದು ಉತ್ತಮ ಮನೆ ಮದ್ದಾಗಿದೆ.
- ಒಂದು ಚಮಚ ಸಬ್ಬಸಿಗೆ ಬೀಜಗಳನ್ನು ಬಾಯಿಗೆ ಹಾಕಿ ಅಗಿದು ನುಂಗುವುದರಿಂದ ಬಿಕ್ಕಳಿಕೆಯು ನಿಲ್ಲುತ್ತದೆ.
- ಅರ್ಧ ಚಮಚ ಲಿಂಬೆರಸವನ್ನು ನೇರವಾಗಿ ಸೇವಿಸಬೇಕು. ಹುಳಿ ಸೇವನೆ ಕಷ್ಟ ಎನ್ನುವವರು ನಿಂಬೆ ರಸವನ್ನು ಉಗುರುಬೆಚ್ಚನೆಯ ನೀರಿಗೆ ಬೆರೆಸಿ ಕುಡಿಯಬಹುದು.
- ಒಂದು ಚಮಚ ಏಲಕ್ಕಿ ಪುಡಿಯನ್ನು ಒಂದು ಲೋಟ ಬಿಸಿನೀರಿಗೆಗೆ ಹಾಕಿ, ಹತ್ತು ನಿಮಿಷಗಳ ಬಳಿಕ ಸೋಸಿ ಕುಡಿಯುವುದು ಬಿಕ್ಕಳಿಕೆಗೆ ಶೀಘ್ರ ಪರಿಹಾರವಾಗಿದೆ.
- ಬಿಕ್ಕಳಿಕೆ ಬಂದ ಕೂಡಲೇ ಹಿಂಬದಿಯಿಂದ ಕುತ್ತಿಗೆಯ ಸಮೀಪವಿರುವ ಪ್ರದೇಶವನ್ನು ಮಸಾಜ್ ಮಾಡಿದರೆ ಬಿಕ್ಕಳಿಕೆಯು ನಿಂತು ಹೋಗುತ್ತದೆ.
- ಒಂದು ಚಮಚ ಬೆಣ್ಣೆಯನ್ನು ಸೇವಿಸುವುದರಿಂದಲೂ ಈ ಬಿಕ್ಕಳಿಕೆ ಸಮಸ್ಯೆಯು ಕಡಿಮೆಯಾಗುತ್ತದೆ.
- ವ್ಯಕ್ತಿಯ ಗಮನವನ್ನು ಬೇರೆಡೆ ಸೆಳೆಯುವುದರಿಂದ ಬಿಕ್ಕಳಿಕೆಯು ನಿವಾರಣೆಯಾಗುತ್ತದೆ.