ಬೆಂಗಳೂರು: ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಮೂರು ಕ್ಷೇತ್ರಗಳನ್ನು ಗೆಲ್ಲಲು ತಯಾರಿ ಮಾಡಿಕೊಳ್ಳುವ ಬಗ್ಗೆ ಚರ್ಚೆಯಾಗಿದ್ದು, ಮೂರು ಕ್ಷೇತ್ರಗಳಿಗೆ ಉಸ್ತುವಾರಿ ನೇಮಕ ಮಾಡಲಾಗಿದೆ ಎಂದು ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ. ಸಭೆಯ ಬಳಿಕ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಬೈ ಎಲೆಕ್ಷನ್ ಬಗ್ಗೆ ಚರ್ಚಿಸಲಾಗಿದೆ. 3 ಕ್ಷೇತ್ರಗಳನ್ನ ಗೆಲ್ಲಲು ತಯಾರಿ ಮಾಡಿಕೊಳ್ಳುವ ಬಗ್ಗೆ ಚರ್ಚೆಯಾಗಿದೆ.
ಚನ್ನಪಟ್ಟಣ ನನಗೆ ಉಸ್ತುವಾರಿ ನೀಡಿದ್ದಾರೆ. ಇನ್ನುಳಿದಂತೆ ಸಂಡೂರು ಕ್ಷೇತ್ರದ ಉಸ್ತುವಾರಿ ಸಚಿವ ಜಮೀರ್ಗೆ ಹಾಗೂ ಶಿಗ್ಗಾಂವಿ ಕ್ಷೇತ್ರದ ಉಸ್ತುವಾರಿಯನ್ನು ಸಚಿವ ಈಶ್ವರ್ ಖಂಡ್ರೆಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮೂತ್ರ ವಿಸರ್ಜನೆ ವೇಳೆ ಕೆಟ್ಟ ವಾಸನೆ ಬರುತ್ತಿದೆಯೇ..? ಹಾಗಾದ್ರೆ ಈ ಕಾಯಿಲೆಗಳ ಸೂಚನೆ ಇರಬಹುದು.!
ನಮ್ಮ ಅಭ್ಯರ್ಥಿಗಳ ಪಟ್ಟಿ ಮಂಗಳವಾರ ದೆಹಲಿಗೆ ಕಳಿಸಿಕೊಡಲಾಗುತ್ತೆ. ಅಭ್ಯರ್ಥಿಗಳ ಹೆಸರು ಫೈನಲ್ ಆಗಬಹುದು. ಸಂಡೂರು ವಿಧಾನಸಭಾ ಕ್ಷೇತ್ರದಿಂದ ತುಕಾರಾಮ್ ಕುಟುಂಬಕ್ಕೆ ಕೊಡುವುದರ ಬಗ್ಗೆ ಅಂತಿಮವಾಗಿದೆ. ಚನ್ನಪಟ್ಟಣ ಹಾಗೂ ಶಿಗ್ಗಾಂವಿ ಕ್ಷೇತ್ರದ ಬಗ್ಗೆ ಚರ್ಚಿಸಿ ದೆಹಲಿಗೆ ಪಟ್ಟಿ ಕಳಿಸಲಾಗುತ್ತೆ. ಚನ್ನಪಟ್ಟಣ ಅಭ್ಯರ್ಥಿ ಯಾರು ಅನ್ನೋದರ ಬಗ್ಗೆ ನಿಮಗೂ ಗೋತ್ತು ನಮಗೂ ಗೋತ್ತು ಹೈಕಮಾಂಡ್ ಅಂತಿಮ ತೀರ್ಮಾನ ಮಾಡಲಿದೆ ಎಂದು ಹೇಳಿದ್ದರೆ.