ಮಂಡ್ಯ:- ನ್ಯಾಯಯುತವಾಗಿ ಹೇಳಬೇಕು ಅಂದ್ರೆ ಚನ್ನಪಟ್ಟಣ ಟಿಕೆಟ್ ನಮಗೆ ಸಿಗಬೇಕು ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕಿಚ್ಚ ಸುದೀಪ್ ತಾಯಿ ವಿಧಿವಶ: ಕನ್ನಡದಲ್ಲೇ ಸಂತಾಪ ಸೂಚಿಸಿದ ಪವನ್ ಕಲ್ಯಾಣ್!
ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಚನ್ನಪಟ್ಟಣ ಜೆಡಿಎಸ್ ಭದ್ರಕೋಟೆ ಅನ್ನೋದು ದೆಹಲಿ ಮಟ್ಟದಲ್ಲೂ ಗೊತ್ತಿದೆ. ನ್ಯಾಯಯುತವಾಗಿ ಚರ್ಚೆ ಮಾಡೋದಾದ್ರೆ ಚನ್ನಪಟ್ಟಣ ಟಿಕೆಟ್ ನಮಗೆ ಬರಬೇಕು ಎಂದರು.
ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ಗೊಂದಲ ಏನು ಇಲ್ಲ. ಯೋಗೇಶ್ವರ್ ಸಹ ನಿಲ್ಲಬೇಕು ಅಂತಾ ಹೇಳ್ತಾರೆ. ನ್ಯಾಯಯುತವಾಗಿ ಚರ್ಚೆ ಮಾಡೋದಾದ್ರೆ ಚನ್ನಪಟ್ಟಣ ನಮಗೆ ಬರಬೇಕು. ಮೂರು ಕ್ಷೇತ್ರಗಳ ಪೈಕಿ 2 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಚನ್ನಪಟ್ಟಣ ವಿಚಾರದಲ್ಲಿ ನಮ್ಮ ಪಕ್ಷದ ಪರವಾಗಿ ನಿರ್ಧಾರ ಮಾಡಬೇಕು. ಅದೇ ನಿಟ್ಟಿನಲ್ಲಿ ಚರ್ಚೆಯಾಗುತ್ತಿದೆ. ಇಂದು ಈ ಬಗ್ಗೆ ಸಭೆ ಇದೆ. ಇಂದೇ ಅಭ್ಯರ್ಥಿ ಘೋಷಣೆ ಆಗುತ್ತೆ ಎಂದು ತಿಳಿಸಿದರು.
ದೆಹಲಿ ಮಟ್ಟದಲ್ಲಿ ಚನ್ನಪಟ್ಟಣ ಟಿಕೆಟ್ ಸಮಸ್ಯೆ ಇಲ್ಲ. ಕಳೆದ ಎರಡು ಬಾರಿ ಚನ್ನಪಟ್ಟಣದಲ್ಲಿ ನಾನು ಪ್ರತಿನಿಧಿಸಿದ್ದೇನೆ. ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ ಅನ್ನೋದು ದೆಹಲಿ ಮಟ್ಟದಲ್ಲಿ ಗೊತ್ತಿದೆ. ಮೂರು ಉಪಚುನಾವಣೆ ಕ್ಷೇತ್ರಗಳ ಪೈಕಿ ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಪಡೆ ಇದೆ. ಗೆಲ್ಲುವ ದೃಷ್ಟಿಯಿಂದ ಬಿಜೆಪಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಟ್ಟುಕೊಟ್ಟೆವು. ನಮ್ಮ ಕುಟುಂಬದವರನ್ನೇ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಿಸಿದ್ದೇವೆ. ಆ ರೀತಿ ಔದಾರ್ಯ ಅವರ ಕಡೆಯಿಂದಲೂ ಬರಬೇಕು ಎನ್ನುತ್ತಾ ಪರೋಕ್ಷವಾಗಿ ಸಿಪಿವೈ ಜೆಡಿಎಸ್ ಚಿಹ್ನೆಯಡಿ ನಿಲ್ಲಲಿ ಎಂದು ಕುಮಾರಸ್ವಾಮಿ ಹೇಳಿದರು