ಕಿಚ್ಚ ಸುದೀಪ್ ತಾಯಿ ವಿಧಿವಶ ಹಿನ್ನೆಲೆ, ಆಂಧ್ರದ DCM ಪವನ್ ಕಲ್ಯಾಣ್ ಅವರು, ಕನ್ನಡದಲ್ಲೇ ಸಂತಾಪ ಸೂಚಿಸಿದ್ದಾರೆ.
ಚಿಕನ್ ಬಿರಿಯಾನಿಯಲ್ಲಿ ಕಪ್ಪೆ ಪ್ರತ್ಯಕ್ಷ: ವಿದ್ಯಾರ್ಥಿಗಳು ಶಾಕ್, ಕ್ರಮಕ್ಕೆ ಆಗ್ರಹ!
ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಕಚೇರಿ’ ಎಕ್ಸ್ ಖಾತೆ ಮೂಲಕ ಪವನ್ ಕಲ್ಯಾಣ್ ಅವರು ಪೋಸ್ ಮಾಡಿದ್ದಾರೆ. ‘ಶ್ರೀ ಸುದೀಪ್ ಅವರ ಕುಟುಂಬಕ್ಕೆ ಸಂತಾಪಗಳು. ಖ್ಯಾತ ನಟ ಸುದೀಪ್ ಅವರ ತಾಯಿ ಶ್ರೀಮತಿ ಸರೋಜಾ ಸಂಜೀವ್ ಅವರು ವಿಧಿವಶರಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ. ಶ್ರೀಮತಿ ಸರೋಜಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಪವನ್ ಕಲ್ಯಾಣ್ ಬರೆದಿದ್ದಾರೆ.
ತಮ್ಮ ನಟನೆಯ ಮೇಲೆ ತಾಯಿಯ ಪ್ರಭಾವ ಮತ್ತು ಪ್ರೋತ್ಸಾಹ ಇದೆ ಎಂದು ಸುದೀಪ್ ಅವರು ಹೇಳಿದ್ದರು. ತಾಯಿಯ ನಷ್ಟದಿಂದ ಬೇಗ ಚೇತರಿಸಿಕೊಳ್ಳಬೇಕು. ಸುದೀಪ್ ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು’ ಎಂದು ಪವನ್ ಕಲ್ಯಾಣ್ ಅವರು ಬರಹ ಪೂರ್ಣಗೊಳಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಕೂಡ ಸುದೀಪ್ಗೆ ಸಂತಾಪದ ನುಡಿಗಳನ್ನು ತಿಳಿಸಿದ್ದಾರೆ.