ಹೈದರಾಬಾದ್:- ಚಿಕನ್ ಬಿರಿಯಾನಿಯಲ್ಲಿ ಸತ್ತ ಕಪ್ಪೆ ಪ್ರತ್ಯಕ್ಷವಾಗಿದ್ದು, ಇದನ್ನು ಕಂಡ ವಿದ್ಯಾರ್ಥಿಗಳು ಶಾಕ್ ಆದ ಘಟನೆ ಹೈದರಾಬಾದ್ನ ಐಐಐಟಿ ಮೆಸ್ನಲ್ಲಿ ಜರುಗಿದೆ.
ಇದೇ ತಿಂಗಳ 16ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ, ಈ ವಿಷಯವನ್ನು ತೆಲಂಗಾಣ ಆಹಾರ ಸುರಕ್ಷತಾ ಆಯುಕ್ತರ ಗಮನಕ್ಕೂ ತರಲಾಗಿದೆ.
‘ಇಂದು ಕದಂಬ ಮೆಸ್ನಲ್ಲಿ ನನ್ನ ಸ್ನೇಹಿತನ ಊಟದಲ್ಲಿ ಕಪ್ಪೆ ಕಂಡುಬಂದಿದೆ. ಇದನ್ನು ಒಪ್ಪಲಾಗದು ಮತ್ತು ಗಂಭೀರವಾದ ಆರೋಗ್ಯದ ಅಪಾಯವನ್ನು ಉಂಟುಮಾಡುತ್ತದೆ ಎಂದು @cfs_telangana , ದಯವಿಟ್ಟು ತಕ್ಷಣ ಕ್ರಮ ತೆಗೆದುಕೊಳ್ಳಿ ಎಂದು ಟ್ವಿಟರ್ ಎಕ್ಸ್ ನಲ್ಲಿ ಬರೆದುಕೊಂಡಿರುವ ವಿದ್ಯಾರ್ಥಿ,
ವಿದ್ಯಾರ್ಥಿಗಳು ಹೇಳುವಂತೆ, ಗಚ್ಚಿಬೌಲಿ ಐಐಐಟಿಯಲ್ಲಿನ ಕದಂಬ ಮೆಸ್ನಲ್ಲಿ ನಡೆದಿರುವ ಘಟನೆ. ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಚಿಕನ್ ಬಿರಿಯಾನಿ ನೀಡಲಾಗಿತ್ತು. ಈ ವೇಳೆ ತಟ್ಟೆಯಲ್ಲಿ ಬಡಿಸುವಾಗ ಸತ್ತ ಕಪ್ಪೆ ಪತ್ತೆಯಾಗಿದೆ. ಸತ್ತ ಕಪ್ಪೆ ನೋಡುತ್ತಿದ್ದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಮೆಸ್ ವ್ಯವಸ್ಥಾಪಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.