ಬೆಂಗಳೂರು: ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ 8 ವಿಕೆಟ್ಗಳ ಜಯ ಸಾಧಿಸಿದೆ. ಆ ಮೂಲಕ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಭಾರತ ನೀಡಿದ್ದ 107 ರನ್ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಸುಲಭ ಜಯಗಳಿಸಿತು. 1988 ರ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಕಿವೀಸ್ ಪಡೆ ಮೊದಲ ಜಯವನ್ನು ದಾಖಲಿಸಿತು. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡನೇ ಇನ್ನಿಂಗ್ಸ್ನಲ್ಲೂ ರಚಿನ್ ರವೀಂದ್ರ ಹಾಗೂ ವಿಲ್ ಯಂಗ್ ಉತ್ತಮ ಪ್ರದರ್ಶನ ತೋರಿ ಭಾರತಕ್ಕೆ ಸೋಲಿನ ರುಚಿ ತೋರಿದರು.
ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 402 ರನ್ಗಳಿಗೆ ಆಲೌಟ್ ಆಗಿತ್ತು. ಇದರಲ್ಲಿ ಟೀಮ್ ಸೌತಿ 65, ಡಿವೋನ್ ಕಾನ್ವೆ 91, ರಚಿನ್ ರವೀಂದ್ರ 134 ರನ್ಗಳನ್ನ ಗಳಿಸಿ ತಂಡಕ್ಕೆ ಕೊಡುಗೆ ನೀಡಿದ್ದರು. ಇದರಿಂದ 356ರನ್ಗಳ ಲೀಡ್ ಪಡೆದುಕೊಂಡಿತ್ತು. ಬಳಿಕ 2ನೆ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಮ್ ಬೃಹತ್ ಮೊತ್ತ ಕಲೆ ಹಾಕಿತ್ತು. ರೋಹಿತ್ 50, ಕೊಹ್ಲಿ 70, ರಿಷಬ್ ಪಂತ್ 99 ಹಾಗೂ ಸರ್ಫರಾಜ್ ಅವರ 150 ರನ್ಗಳ ನೆರವಿನಿಂದ ಭಾರತ ಒಟ್ಟು 462 ರನ್ಗಳನ್ನು ಕಲೆ ಹಾಕಿತ್ತು.
ಮೂತ್ರ ವಿಸರ್ಜನೆ ವೇಳೆ ಕೆಟ್ಟ ವಾಸನೆ ಬರುತ್ತಿದೆಯೇ..? ಹಾಗಾದ್ರೆ ಈ ಕಾಯಿಲೆಗಳ ಸೂಚನೆ ಇರಬಹುದು.!
ಇದರಿಂದ ಭಾರತ 107 ರನ್ಗಳ ಟಾರ್ಗೆಟ್ ಅನ್ನು ಎದುರಾಳಿಗೆ ನೀಡಿತ್ತು. ಈ ಸುಲಭ ಟಾರ್ಗೆಟ್ ಬೆನ್ನು ಹತ್ತಿದ್ದ ನ್ಯೂಜಿಲೆಂಡ್ ಟೀಮ್ 2ನೇ ಇನ್ನಿಂಗ್ಸ್ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 107 ರನ್ಗಳ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿ ಗೆಲುವು ದಾಖಲಿಸಿದೆ. ಮೊದಲ ಟೆಸ್ಟ್ನ ಕೊನೆ ದಿನದಲ್ಲಿ 8 ವಿಕೆಟ್ಗಳಿಂದ ನ್ಯೂಜಿಲೆಂಡ್ ಗೆದ್ದು ಬೀಗಿದೆ. ರಚಿನ್ ರವೀಂದ್ರ ಅವರಿಗೆ ಪ್ಲೇಯರ್ ಆಫ್ ದೀ ಮ್ಯಾಚ್ ಪ್ರಶಸ್ತಿ ನೀಡಲಾಗಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದಿದೆ.