ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಗಾಯದ ಸಮಸ್ಯೆಗೆ ಒಳಗಾದ ಶುಭಮನ್ ಗಿಲ್ ಪ್ಲೇಯಿಂಗ್XI ನಿಂದ ಹೊರಗುಳಿದರು. ಆದ್ದರಿಂದ ಎಂಟು ವರ್ಷಗಳ ನಂತರ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದರು. ಆದರೆ ಮೊದಲ ಇನಿಂಗ್ಸ್ ನಲ್ಲಿ 9 ಎಸೆತಗಳನ್ನು ಎದುರಿಸಿಯೂ ರನ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ದ್ವಿತೀಯ ಇನಿಂಗ್ಸ್ ನಲ್ಲಿ 70 ರನ್ ನಿರ್ಮಿಸಿ ಮೂರು ಮಾದರಿ ಕ್ರಿಕೆಟ್ ನಲ್ಲಿ 3ನೇ ಕ್ರಮಾಂಕದಲ್ಲಿ 15,000 ರನ್ ಬಾರಿಸಿದ ಟೀಮ್ ಇಂಡಿಯಾದ ಮೊದಲ ಹಾಗೂ ವಿಶ್ವದ 4ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಪ್ರತಿರಾತ್ರಿ ಮೊಸರು ತಿನ್ನುತ್ತಿದ್ರೆ, ಇಂದಿನಿಂದ ಆ ಅಭ್ಯಾಸ ಬಿಟ್ಬಿಡಿ: ಆಯುರ್ವೇದ ತಜ್ಞರ ಸಲಹೆ ಹೀಗಿದೆ
3 ಮಾದರಿ ಕ್ರಿಕೆಟ್ ನಲ್ಲಿ 3ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು
* 22,869 ರನ್ – ರಿಕ್ಕಿ ಪಾಂಟಿಂಗ್ (ಆಸ್ಟ್ರೇಲಿಯಾ)
* 22,011 ರನ್ – ಕುಮಾರ ಸಂಗಾಕ್ಕರ (ಶ್ರೀಲಂಕಾ)
* 15,696 ರನ್ – ಕೇನ್ ವಿಲಿಯಮ್ಸ್ (ನ್ಯೂಜಿಲೆಂಡ್)
* 15,028 ರನ್ – ವಿರಾಟ್ ಕೊಹ್ಲಿ (ಭಾರತ)
* 14,555 ರನ್ – ರಾಹುಲ್ ದ್ರಾವಿಡ್ (ಭಾರತ)
9000 ಟೆಸ್ಟ್ ರನ್ ಪೂರೈಸಿದ ಕೊಹ್ಲಿ
2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ ವಿರಾಟ್ ಕೊಹ್ಲಿ, ಇದುವರೆಗೂ 197 ಇನಿಂಗ್ಸ್ ನಿಂದ 29 ಶತಕಗಳ ನೆರವಿನಿಂದ 9 ಸಾವಿರ ರನ್ ಪೂರೈಸಿದ್ದಾರೆ. 2014 ರಿಂದ 2022ರವರೆಗೆ ಟೆಸ್ಟ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ವಿರಾಟ್ ಕೊಹ್ಲಿ 40 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಭಾರತ ತಂಡದ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ.
ಟೀಮ್ ಇಂಡಿಯಾ ಪರ ಅತಿ ಹೆಚ್ಚು ಟೆಸ್ಟ್ ರನ್
* 15,921 ರನ್ – ಸಚಿನ್ ತೆಂಡೂಲ್ಕರ್- 329 ಇನಿಂಗ್ಸ್
* 13,265 ರನ್ – ರಾಹುಲ್ ದ್ರಾವಿಡ್- 284 ಇನಿಂಗ್ಸ್
* 10,122 ರನ್ – ಸುನೀಲ್ ಗವಾಸ್ಕರ್- 214 ಇನಿಂಗ್ಸ್
* 9,000* ರನ್ – ವಿರಾಟ್ ಕೊಹ್ಲಿ- 197 ಇನಿಂಗ್ಸ್.
ಟೆಸ್ಟ್ ಕ್ರಿಕೆಟ್ ನಲ್ಲಿ 29 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಅತಿ ಹೆಚ್ಚು ಶತಕ ಬಾರಿಸಿದ ಭಾರತ ತಂಡದ 4ನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ (51), ರಾಹುಲ್ ದ್ರಾವಿಡ್ (36) ಹಾಗೂ ಸುನೀಲ್ ಗವಾಸ್ಕರ್ (30) ಅತಿ ಹೆಚ್ಚು ಶತಕ ಗಳಿಸಿದ ಆಟಗಾರರಾಗಿದ್ದು, ಗವಾಸ್ಕರ್ ಹಾಗೂ ದ್ರಾವಿಡ್ ಅವರ ಶತಕ ದಾಖಲೆ ಮುರಿಯುವ ಅವಕಾಶವನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ.