ನವದೆಹಲಿ: ಕೆಲಸ ಇಲ್ಲದೇ ಖಾಲಿ ಕೂತಿರುವ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು,, ಇನ್ನೂ 5 ವರ್ಷದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಸಲಿದ್ದೇವೆ ಎಂದು ಟಾಟಾ ಗ್ರೂಪ್ ಘೋಷಣೆ ಮಾಡಿದೆ. ಈ ಸಂಬಂಧ ಮಾತನಾಡಿದ ಟಾಟಾ ಗ್ರೂಪ್ ಮುಖ್ಯಸ್ಥ ಚಂದ್ರಶೇಖರನ್ ಮಾತನಾಡಿ, ಮ್ಯಾನುಫ್ಯಾಕ್ಚರಿಂಗ್ ಉದ್ಯೋಗಗಳನ್ನು ಸೃಷ್ಟಿಸದೇ ವಿಕಸಿತ ಭಾರತದ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಮ್ಯಾನುಫ್ಯಾಕ್ಚರಿಂಗ್ನಿಂದ ಬಹಳ ದೊಡ್ಡ ಅವಕಾಶ ಸಿಕ್ಕಿದೆ. ಈ ಸೆಕ್ಟರ್ನಲ್ಲಿ ಉದ್ಯೋಗ ಸೃಷ್ಟಿಸದೇ ವಿಕಸಿತ ಭಾರತದ ಗುರಿ ಸಾಧಿಸಲು ಆಗುವುದಿಲ್ಲ. ಪ್ರತೀ ತಿಂಗಳು 10 ಲಕ್ಷ ಜನರು ಉದ್ಯೋಗ ಕ್ಷೇತ್ರಕ್ಕೆ ಅಡಿ ಇಡುತ್ತಿದ್ದಾರೆ ಎಂಬುದು ನಮಗೆಲ್ಲಾ ಗೊತ್ತಿರುವುದೇ. ಹೀಗಾಗಿ, 10 ಕೋಟಿ ಉದ್ಯೋಗ ಸೃಷ್ಟಿಸುವುದು ಅಗತ್ಯವಾಗಿದೆ.
ಪ್ರತಿರಾತ್ರಿ ಮೊಸರು ತಿನ್ನುತ್ತಿದ್ರೆ, ಇಂದಿನಿಂದ ಆ ಅಭ್ಯಾಸ ಬಿಟ್ಬಿಡಿ: ಆಯುರ್ವೇದ ತಜ್ಞರ ಸಲಹೆ ಹೀಗಿದೆ
ಸೆಮಿಕಂಡಕ್ಟರ್ನಂತಹ ಕ್ಷೇತ್ರವಾದರೆ ನೀವು ಒಂದು ನೇರ ಉದ್ಯೋಗ ಸೃಷ್ಟಿಸಿದರೆ 8ರಿಂದ 10 ಪರೋಕ್ಷ ಉದ್ಯೋಗಗಳೂ ಸೃಷ್ಟಿಯಾಗುತ್ತವೆ. ಮ್ಯಾನುಫ್ಯಾಕ್ಚರಿಂಗ್ ಉದ್ಯೋಗಗಳು ಹಲವು ಪಟ್ಟು ಹೆಚ್ಚುವರಿ ಉದ್ಯೋಗಗಳಿಗೆ ಎಡೆ ಮಾಡಿಕೊಡುತ್ತವೆ’ ಎಂದು ಟಾಟಾ ಸನ್ಸ್ ಛೇರ್ಮನ್ ಆಗಿರುವ ಅವರು ಅಭಿಪ್ರಾಯಪಟ್ಟಿದ್ದಾರೆ.
ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಸಂಚಲನ ಕಾಣುತ್ತಿದೆ. ಸರ್ಕಾರ ಒತ್ತು ಕೊಡುತ್ತಿದೆ. ಒಂದು ಗ್ರೂಪ್ ಸಂಸ್ಥೆಯಾಗಿ ಪ್ರಾಜೆಕ್ಟ್ಗಳನ್ನು ಅಚ್ಚರಿಯ ವೇಗದಲ್ಲಿ ಆರಂಭಿಸಲು ಸಾಧ್ಯವಾಗಿದೆ. ಸೆಮಿಕಂಡಕ್ಟರ್, ಪ್ರಿಸಿಶನ್ ಮ್ಯಾನುಫ್ಯಾಕ್ಚರಿಂಗ್, ಅಸೆಂಬ್ಲಿಂಗ್, ಎಲೆಕ್ಟ್ರಿವ್ ವಾಹನಗಳು, ಬ್ಯಾಟರಿ ಹಾಗು ಸಂಬಂಧಿತ ಉದ್ಯಮಗಳಲ್ಲಿ ನಾವು ಮಾಡಿರುವ ಹೂಡಿಕೆಯಿಂದ ಮುಂದಿನ ಐದು ವರ್ಷದಲ್ಲಿ ಐದು ಲಕ್ಷ ಉದ್ಯೋಗ ಸೃಷ್ಟಿಸಬಹುದು ಎಂದು ಚಂದ್ರಶೇಖರನ್ ಹೇಳಿದ್ದಾರೆ.
ಮ್ಯಾನುಫ್ಯಾಕ್ಚರಿಂಗ್ ಉದ್ಯೋಗಳನ್ನು ಸೃಷ್ಟಿಸಲು ಕನಿಷ್ಠ 500ರಿಂದ 1,000 ಸಣ್ಣ ಹಾಗೂ ಮಧ್ಯಮ ಗಾತ್ರದ ಕಂಪನಿಗಳಾದರೂ ಸ್ಥಾಪನೆಯಾಗುವುದು ಅಗತ್ಯ ಎಂಬ ವಿಚಾರವನ್ನೂ ಟಾಟಾ ಸನ್ಸ್ ಮುಖ್ಯಸ್ಥರು ಪ್ರಸ್ತಾಪಿಸಿದ್ದಾರೆ.