ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರ ಹಿಂಪಡೆಯುವವರೆಗೆ ಹೋರಾಟ ನಡೆಸಲು ನಗರದಲ್ಲಿಂದುಸದ್ಭಾವ ವೇದಿಕೆ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆ ನಿರ್ಧರಿಸಿದೆ.
ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯೋದು ಗ್ಯಾರಂಟಿ: ಸುರೇಶ್ ಬಾಬು!
ಮುಸ್ಲಿಂ ತುಷ್ಟಿಕರಣ ನೀತಿಯಿಂದ ಹಳೇ ಹುಬ್ಬಳ್ಳಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿರುವ ಸರ್ಕಾರದ ನಿರ್ಧಾರವನ್ನು ಪ್ರತಿಭಟನಾ ಸಭೆ ಒಕ್ಕೊರಲಿನಿಂದ ಖಂಡಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಭಾಷಣಕಾರರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಡಾ. ರವೀಂದ್ರ, ಯಾವುದೇ ಒಂದು ನಿರ್ದಿಷ್ಟ ಕೋಮಿನ ವಿರುದ್ಧ ದ್ವೇಷ ಸಾಧಿಸುವುದನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘವಾಗಲಿ, ವಿಶ್ವ ಹಿಂದು ಪರಿಷತ್ ಆಗಲಿ, ಬಜರಂಗ ದಳವಾಗಲಿ ಕಲಿಸುವುದಿಲ್ಲ. ಎಲ್ಲರೊಂದಿಗೆ ಸೇರಿ ಬಾಳುವುದನ್ನು ಹಿಂದುತ್ವ ಕಲಿಸುತ್ತದೆ.
ಹಿಂದುಗಳು ಯಾವುದೇ ಜಾತಿಯನ್ನು ವಿರೋಧಿಸುವುದಿಲ್ಲ. ಹಿಂದುಗಳು ಭ್ರಾತೃತ್ವದಲ್ಲಿ ನಂಬಿಕೆ ಇಡುತ್ತಾರೆ ಎಂದು ಹೇಳಿದರು.
ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಮುಸ್ಲಿಂರ ಮೇಲೆ ಇರುವ ಪ್ರಕಣಗಳನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಅಲ್ಪಸಂಖ್ಯಾತರ ತುಷ್ಟಿಕರಣ ನೀತಿ ವಿರೋಧಿಸಿ ಸದ್ಭಾವ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಹಳೇ ಹುಬ್ಬಳ್ಳಿ ಘಟನೆಗೆ ಕಾರಣವಾಗಿದ್ದು ಯುವಕನೊಬ್ಬ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದಂತೆ ಇರುವ ವಿಡಿಯೋದ ಸ್ಟೇಟಸ್ ಇಟ್ಟಿದ್ದು. ಕೇಸರಿ ಧ್ವಜ ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದು ಅಲ್ಲ. ಕೇಸರಿ ಬಣ್ಣ ರಾಷ್ಟ್ರಧ್ವಜದಲ್ಲಿಯೇ ಇದೆ. ಇದನ್ನು ಎಲ್ಲ ಸಮಾಜದವರು ಅರಿತುಕೊಳ್ಳಬೇಕು.
ಆದರೆ, ಹುಬ್ಬಳ್ಳಿಯ ಕೆಲ ಮುಸ್ಲಿಂರು ಇದನ್ನೇ ತಪ್ಪಾಗಿ ಭಾವಿಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಪೊಲೀಸ್ ಜೀಪ್ ಧ್ವಂಸ ಮಾಡಿದರು ಎಂದರು.
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಗಂಭೀರತೆ ಅರಿತ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಇದರ ತನಿಖೆ ನಡೆಸಿತು. ಆದರೆ, ಸರ್ಕಾರ ಮಾತ್ರ ಇದರ ಗಂಭೀರತೆ ಅರಿಯದೇ, ಮತಬ್ಯಾಂಕ್ ಉದ್ದೇಶದಿಂದ ಪ್ರಕರಣ ಹಿಂಪಡೆಯಲು ಮುಂದಾಯಿತು ಎಂದು ದೂರಿದರು.
60 ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ. ಇದರಲ್ಲಿ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆಯುವುದಕ್ಕೆ ಮಾತ್ರ ಆಕ್ಷೇಪ ಇದೆ. ತಪುಪ ಮಾಡಿದವನು ಯಾವುದೇ ಸಮಾಜದವನು ಆಗಿದ್ದರೂ ಆತನಿಗೆ ಶಿಕ್ಷೆ ಆಗಬೇಕು. ಆದರೆ, ತುಷ್ಟಿಕರಣ, ಮತಬ್ಯಾಂಕ್ ಅಂಧತ್ವದಲ್ಲಿ ಸರ್ಕಾರ ಜನರ ರಕ್ಷಣೆ ಮಾಡುವುದನ್ನೇ ಮರೆತಿದೆ. ಹಳೇ ಹುಬ್ಬಳ್ಳಿ ಗಲಭೆಯ ಹಿಂದೆ ದೊಡ್ಡ ಪಿತೂರಿ ಇದೆ ಎಂಬುದನ್ನು ಅರಿಯುವಲ್ಲಿ ಸರ್ಕಾರ ವಿಫಲವಾಯಿತು ಎಂದು ಕಳವಳ ವ್ಯಕ್ತಪಡಿಸಿದರು.
ಬಾಬರ ದುಷ್ಟ ಎಂದಾಕ್ಷಣ ಎಲ್ಲ ಮುಸ್ಲಿಂರು ಕೆಟ್ಟವರಲ್ಲ. ಆದರೆ, ಆಟೋ ನಿಲ್ದಾಣಗಳಿಗೆ ಬಾಬರ, ಟಿಪ್ಪ ಸುಲ್ತಾನ ಹೆಸರು ಇಡುವುದನ್ನು ನೋಡಿದರೆ ಸಹಿಸಲು ಆಗುವುದಿಲ್ಲ. ಬಾಬರ ಹಾಗೂ ಟಿಪ್ಪ ಅನೇಕ ಹಿಂದುಗಳ ಹತ್ಯೆ ಮಾಡಿದರು, ಮತಾಂತರಗೊಳಿಸಿದರು. ಆಟೋ ನಿಲ್ದಾಣಗಳಿಗೆ ಹೆಸರು ಇಡುವುದಾದರೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಸಂತ ಶಿಶುನಾಳ ಶರೀಫ ಅವರಂತಹ ಗಣ್ಯರ ಹೆಸರು ಇಡಿ ಎಂದು ಹೇಳಿದರು.
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಹಾರುತ್ತಿರುವ ಕೇಸರಿ ಧ್ವಜವನ್ನು ಹೊಲಿದಿದ್ದು ಜಾರ್ಖಂಡನ ಮುಸ್ಲಿಂ ರ್ದಜಿ. ಕೇಸರಿ ಅಭಿವೃದ್ಧಿಯ ಪ್ರತೀಕ. ಇದರಲ್ಲಿ ಕೋಮು ಸೌಹಾರ್ದತೆ ಕೆದಕುವ ವಿಷಯವೇ ಇಲ್ಲ ಎಂದರು.
ನಮಗೆ ಬೇಕಿರುವುದು ತುಷ್ಟಿಕರಣ ಅಲ್ಲ, ರಾಷ್ಟ್ರೀಕರಣ. ಕರ್ನಾಟಕದಲ್ಲಿ ಬೇರೆ ಬೇರೆ ಜಾತಿಗಳ ಮತಬ್ಯಾಂಕ್ ಇದೆಯೇ ಹೊರತು, ಹಿಂದು ಮತಬ್ಯಾಂಕ್ ಇಲ್ಲ ಎಂದು ಖೇದ ವ್ಯಕ್ತಪಡಿಸಿದರು.
ವಿವಿಧ ಸಮಾಜಗಳ ಮುಖಂಡರಾದ ಭಾಸ್ಕರ ಜಿತೂರಿ, ಮಂಜುನಾಥ ಕೊಂಡಪಲ್ಲಿ, ಸಮೀರ ಆಚಾರ್ಯ ಕಂಠಪಲ್ಲಿ, ಸದ್ಭಾವ ವೇದಿಕೆ ಸಹ ಸಂಯೋಜಕ ಶಂಕರಣ್ಣ ಮುನವಳ್ಳಿ ಹಾಗೂ ಇತರರು ಮಾತನಾಡಿದರು. ವೇದಿಕೆ ಸಂಯೋಜಕ ಮಹಾದೇವ ಕರಮರಿ ಅಧ್ಯಕ್ಷತೆ ವಹಿಸಿದ್ದರು. ಸುಭಾಸಸಿಂಗ್ ಜಮಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಸಮಾಜದ ಪ್ರಮುಖರಾದ ಸುನೀಲ ಚಿಲ್ಲಾಳ, ಶ್ರೀಧರ ಕಲಬುರ್ಗಿ, ಪರ್ವತಸಿಂಗ್, ಕೃಷ್ಣ ಚವ್ಹಾಣ, ಅನಂತಪದ್ಮನಾಭ ಐತಾಳ, ಶಿವಾನಂದ ಅಂಕುಶ, ಲಲಿತಚಂದ ಜೈನ್, ಜ್ಯೋತಿಬಾ ಕಲಾಲ ಹಾಗೂ ಇತರರು ವೇದಿಕೆಯಲ್ಲಿದ್ದರು.
ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ರೂಪಾ ಶೆಟ್ಟಿ, ಪ್ರಮುಖರಾದ ಜಿತೇಂದ್ರ ಮಜೇಥಿಯಾ, ನಾರಾಯಣ ಜರತಾರಘರ, ಡಾ. ರಘು ಅಕ್ಕಮಂಚಿ ಹಾಗೂ ಇತರರು ಪಾಲ್ಗೊಂಡಿದ್ದರು.
ಪ್ರತಿಭಟನಾ ಸಭೆಯಲ್ಲಿ ಕೈಗೊಂಡ ಇತರ ನಿರ್ಧಾರಗಳು :
<span;>* ಕಾನೂನು ರಕ್ಷಿಸುವ ಆರಕ್ಷಕರ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧ. ಈ ಘಟನೆಯಿಂದ ಆರಕ್ಷಕರ ಆತ್ಮಸ್ಥೆರ್ಯ ಕುಗ್ಗಿಸಿದಂತಾಗಿದೆ.
<span;>* ಈ ಪ್ರಕರಣದಲ್ಲಿ ತಪುಪ ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ತನಿಖೆಯನ್ನು ಪ್ರಾಮಾಣಿಕವಾಗಿ ನಡೆಸಿ, ಯಾವುದೇ ಕಾರಣಕ್ಕೂ ಇಲ್ಲಿ ಜಾತಿ ರಾಜಕರಾಣ ಮಾಡದೇ, ಸರ್ಕಾರ ತನಿಖೆಗೆ ಆದೇಶಿಸಬೇಕು.
<span;>* ಹಿಂದು ಸಮಾಜದ ಮೇಲೆ, ದೇವಸ್ಥಾನಗಳ ಮೇಲೆ, ಧಾರ್ಮಿಕ ಮೆರವಣಿಗೆಗಳ ಮೇಲೆ ಆಗುತ್ತಿರುವ ಮುಸ್ಲಿಂ ಮತಾಂದ ಶಕ್ತಿಯ ದಾಳಿಯನ್ನು ಸದ್ಭಾವ ವೇದಿಕೆ ಖಂಡಿಸುತ್ತದೆ
.