ಬೆಂಗಳೂರು:- ಮುಡಾ ಕಚೇರಿ ಮೇಲೆ ಇ.ಡಿ ದಾಳಿ ವಿಚಾರವಾಗಿ ಬಿಕೆ ಹರಿಪ್ರಸಾದ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇ.ಡಿ ಹಾಗೂ ಸಿಬಿಐ ದುರುಪಯೋಗವಾಗುತ್ತಿದೆ. ಇ.ಡಿ ಒಂದು ರೀತಿ ವಾಷಿಂಗ್ ಮಷಿನ್ ಇದ್ದಂತೆ. ಕರೆದುಕೊಂಡು ಹೋಗಿ ರುಬ್ಬಿ ಬಾಯ್ಬಿಡಿಸಿ ಕಳಿಸುತ್ತಾರೆ. ಈಗ ಅಂತಹವರು ಯಾರೂ ಇಲ್ಲ. ಇ.ಡಿ ದಾಳಿ ಮಾಡಬೇಕಿರೋದು ಪ್ರಹ್ಲಾದ್ ಜೋಶಿಯವರ ಮನೆ ಮೇಲೆ.
2 ಕೋಟಿ ರೂ. ಆರೋಪ ಎದುರಾಗಿದೆ. ಹಿಂದೂ ನಾವೆಲ್ಲಾ ಒಂದು ಅನ್ನೋರು ಸ್ವಂತ ತಮ್ಮನಿಗೂ ನನಗೂ ಸಂಬಂಧವಿಲ್ಲ ಎನ್ನುತ್ತಾರೆ. ನೈತಿಕತೆ ಪಾಠ ಹೇಳುವ ಜೋಶಿ ವಿರುದ್ಧ ಇನ್ನೂ ಕುಮಾರಸ್ವಾಮಿ ಪಾರ್ಥೇನಿಯಂಗೆ ಹೋಲಿಸಿದ್ರು.
ನಾನು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹೇಳ್ತೀನಿ ಜೋಶಿ ಪ್ಯಾರೆಸೈಟ್, ಅವರು ಹೋದ ಕಡೆ ಪಕ್ಷ ಬೆಳೆಯಲೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.