ದೆಹಲಿ: ಕಳೆದ 24 ಗಂಟೆಗಳಲ್ಲಿ 3 ವಿಮಾನಗಳಿಗೆ ಬಾಂಬ್ ಬೆದರಿಕೆ (Bomb Threat) ಕರೆಗಳು ಬಂದಿದೆ. ಆ ಮೂಲಕ ಒಂದು ವಾರದಲ್ಲಿ 35ಕ್ಕೂ ಹೆಚ್ಚು ವಿಮಾನಗಳು ಬೆದರಿಕೆ ಕರೆ ಸ್ವೀಕರಿಸಿರುವ ಬಗ್ಗೆ ವರದಿಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ (Ministry Of Civil Aviation) ತಿಳಿಸಿದೆ.
Isha Foundation: ಇಶಾ ಫೌಂಡೇಶನ್ ವಿರುದ್ಧದ ಕೇಸ್ ವಜಾ : ಸದ್ಗುರು ಜಗ್ಗಿ ವಾಸುದೇವ್ಗೆ ಬಿಗ್ ರಿಲೀಫ್
ದೆಹಲಿಯಿಂದ ಲಂಡನ್ಗೆ ಹೊರಟಿದ್ದ ವಿಸ್ತಾರಾ ವಿಮಾನ (Vistara Flight) ಸೋಷಿಯಲ್ ಮೀಡಿಯಾದಲ್ಲಿ ಬಾಂಬ್ ಬೆದರಿಕೆಯ ಕರೆಯನ್ನು ಸ್ವೀಕರಿಸಿದ್ದು, ತಕ್ಷಣ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಫ್ರಾಂಕ್ಫರ್ಟ್ಗೆ ಕಳುಹಿಸುವಂತೆ ನಿರ್ಧರಿಸಲಾಯಿತು. ವಿಮಾನವನ್ನು ಜರ್ಮನಿಯ ಫ್ರಾಂಕ್ಫರ್ಟ್ಗೆ ಕಳುಹಿಸಿ, ಬಳಿಕ ಅಲ್ಲಿಂದ ಲಂಡನ್ಗೆ ಕಳುಹಿಸಲಾಯಿತು.
ಜೈಪುರ್ನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ (Air India) ಎಕ್ಸ್ಪ್ರೆಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಇದರಿಂದಾಗಿ ಸ್ವಲ್ವ ಸಮಯದ ಬಳಿಕ ವಿಮಾನ ಟೇಕ್ಆಫ್ ಆಯಿತು. ಇಂದು ಬೆಳಗ್ಗೆ 6:10ಕ್ಕೆ ಟೇಕ್ ಆಫ್ ಆಗಬೇಕಿದ್ದ ವಿಮಾನ ತಡವಾಗಿ 7:45ಕ್ಕೆ ಟೇಕ್ ಆಫ್ ಆಯಿತು.
ಶುಕ್ರವಾರ ಬೆಂಗಳೂರಿನಿಂದ ಮುಂಬೈಗೆ ಹೊರಡಲು ಸಿದ್ಧವಾಗಿದ್ದ ಆಕಾಶ ಏರ್ (Akash Air) ವಿಮಾನಕ್ಕೆ ಬಾಂಬ್ ಬೆದರಿಕೆಯ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ಸಂಪೂರ್ಣ ಪರಿಶೀಲನೆ ನಡೆಸಲಾಯಿತು. ನೆಟ್ವರ್ಕ್ ಆಪರೇಷನ್ ಕಂಟ್ರೋಲ್ (NOC) ಒಪ್ಪಿಗೆ ನೀಡಿದ ಬಳಿಕ ಸಂಜೆ ಮುಂಬೈಗೆ ಹೊರಟಿತು.