ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಭೂ ಮಾಲೀಕ ದೇವರಾಜ್ ಮನೆಯಲ್ಲಿ ತಡರಾತ್ರಿವರೆಗೂ ಇಡಿ ಶೋಧ ನಡೆಸಿದೆ.
ಬೆಳಿಗ್ಗೆ ಎದ್ದೇಳುತ್ತಿದ್ದಂತೆ ಜಾಸ್ತಿ ಸುಸ್ತಾಗುತ್ತಾ!? ಹಾಗಿದ್ರೆ ಈ ಸುದ್ದಿ ನೀವು ನೋಡಲೇಬೇಕು!
ಮಧ್ಯರಾತ್ರಿ 12 ಗಂಟೆ ವರೆಗೂ ಇಡಿ ವಿಚಾರಣೆ ನಡೆಸಿದರು. ಈ ವೇಳೆ ಪ್ರಮುಖ ದಾಖಲೆಗಳ ಪರಿಶೀಲನೆ ಮಾಡಿದರು. ವಿಚಾರಣೆ ಬಳಿಕ ಹೊರಟು ನಿಂತ ಅಧಿಕಾರಿಗಳಿಗೆ ದೇವರಾಜ್ ಅವರು ಶೇಕ್ ಹ್ಯಾಂಡ್ ಮಾಡಿ ಕಳಿಸಿಕೊಟ್ಟರು.
ದೇವರಾಜ್ ಕುಟುಂಬಕ್ಕೆ ಮೈಸೂರಿನ ಜಾಮೀನು ಬಂದಿದ್ದು ಹೇಗೆ? ಅದರ ಮೂಲ ಯಾವುದು? ಅದನ್ನ ಯಾವಾಗ ಮಾರಾಟ ಮಾಡಿದ್ದು? ಹೀಗೆ ನಾನಾ ವಿಚಾರಗಳ ಬಗ್ಗೆ ಹಾಗೂ ದಾಖಲೆಗಳ ಬಗ್ಗೆ ಇ.ಡಿ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದರು.
ಸಿಎಂ ವಿರುದ್ಧದ ಮುಡಾ ಹಗರಣ ಆರೋಪ ಪ್ರಕರಣದಲ್ಲಿ ಸೈಟ್ನ ಮೂಲ ಮಾಲೀಕ ದೇವರಾಜ್. ಲೋಕಾಯುಕ್ತ ದಾಖಲಿಸಿಕೊಂಡಿರುವ ದೂರಿನಲ್ಲಿ ಅವರು ಎ4 ಆರೋಪಿಯಾಗಿದ್ದಾರೆ.