ಬಿಗ್ ಬಾಸ್’ ಸೀಸನ್ 11 ರಲ್ಲಿ ಚೈತ್ರಾ ಕುಂದಾಪುರ ಅವರು ನೇರವಾಗಿ ಜೈಲು ಸೇರಿದ್ದಾರೆ.
ಕಾಲಮಿತಿಯಲ್ಲಿ ಮೀಸಲಾತಿ ನೀಡಲು ಅಸಾಧ್ಯ: DCM ಡಿಕೆ ಶಿವಕುಮಾರ್ ಖಡಕ್ ಹೇಳಿಕೆ!
ಪ್ರತಿ ಬಿಗ್ ಬಾಸ್ ಸೀಸನ್ನಲ್ಲೂ ಜೈಲು ಇಡಲಾಗುತ್ತದೆ. ಕಳಪೆ ಕಾರಣ ನೀಡಿ ಪ್ರತಿ ವಾರ ಒಬ್ಬರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಈ ಬಾರಿ ಪ್ರಕ್ರಿಯೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಅಪ್ರಾಮಣಿಕ ಹಾಗೂ ಕುತಂತ್ರಿ ಯಾರು ಎಂದು ಸೂಚಿಸಬೇಕು ಮತ್ತು ಅದಕ್ಕೆ ಸೂಕ್ತ ಕಾರಣ ನೀಡಬೇಕು. ಅಂತಿಮವಾಗಿ ಯಾರ ಬಳಿ ಹೆಚ್ಚು ಹಣೆಪಟ್ಟಿ ಇರುತ್ತದೆಯೋ ಅವರು ಜೈಲು ಸೇರಬೇಕು.
ಇದರ ಅನುಸಾರ ಚೈತ್ರಾ ಕುಂದಾಪುರ ಅವರು ಅತಿ ಹೆಚ್ಚು ಹಣೆಪಟ್ಟಿ ಪಡೆದುಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಜೈಲು ಸೇರಿದ್ದಾರೆ. ಅವರು ಜೈಲಿಗೆ ಕಾಲಿಡುವಾಗ ಖುಷಿಯಿಂದಲೇ ತೆರಳಿದ್ದಾರೆ. ‘ನನಗೆ ಖಾಸಗಿತನ ಸಿಗುತ್ತದೆ. ಇಲ್ಲೆಲ್ಲ ನಿಮ್ಮ ಮುಖ ನೋಡಿ ಸಾಕಾಗಿದೆ’ ಎಂದರು ಅವರು. ಅವರಿಗೆ ಜೈಲಿಗೆ ಹೋಗುತ್ತಿರುವುದಕ್ಕೆ ಯಾವುದೇ ಬೇಸರ ಇಲ್ಲ.
ಚೈತ್ರಾ ಕುಂದಾಪುರ ಅವರು ಉದ್ಯಮಿ ಒಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸೋ ಆಮಿಷ ಒಡ್ಡಿ 5 ಕೋಟಿ ರೂಪಾಯಿ ಹಣ ಪಡೆದಿರುವ ಆರೋಪ ಹೊಂದಿದ್ದಾರೆ. ಈ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ