ಈಗಿನ ವಾತಾವಾರಣದಲ್ಲಿ ಹೆಚ್ಚಿನವರಿಗೆ ಆಗಾಗ ವೈರಲ್ ಜ್ವರ ಕಾಡುತ್ತಿರುತ್ತದೆ. ಸಾಮಾನ್ಯವಾಗಿ ಜ್ವರ ಬಂದಾಗ ಹೆಚ್ಚಿನವರು ಸ್ನಾನ ಮಾಡುವುದಿಲ್ಲ. ಜ್ವರ ಬಿಟ್ಟ ನಂತರವೇ ಸ್ನಾನ ಮಾಡುತ್ತಾರೆ. ಆದರೆ ನಮ್ಮಲ್ಲಿ ಅಧಿಕ ಜನರಿಗೆ ಜ್ವರ ಇದ್ದಾಗ ಸ್ನಾನ ಮಾಡಬಹುದೇ, ಇಲ್ಲವೋ ಎನ್ನುವುದು ತಿಳಿದಿರುವುದಿಲ್ಲ. ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ ತಿಳಿಯೋಣ.
Power Shock: ಬೆಂಗಳೂರಿಗರ ಗಮನಕ್ಕೆ: ನಾಳೆ ಈ ಪ್ರದೇಶಗಳಲ್ಲಿ ಇರಲ್ಲ ಕರೆಂಟ್!
ಜ್ವರ ಬಂದಾಗ ಸ್ನಾನ ಮಾಡಬಾರದು, ಇದರಿಂದ ಜ್ವರ ಹೆಚ್ಚಾಗುತ್ತದೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ, ಅದು ತಪ್ಪು. ವೈರಲ್ ಫೀವರ್ ಇರುವವರು ಸ್ನಾನ ಮಾಡುವುದು ಆರೋಗ್ಯಕರ ಎನ್ನುತ್ತಾರೆ ಕೆಲವು ವೈದ್ಯರು. ಏಕೆಂದರೆ ಇದು ದೇಹದಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸುವುದಲ್ಲದೆ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಆದ್ದರಿಂದ, ವೈರಲ್ ಜ್ವರದ ಸಮಯದಲ್ಲಿ ಸ್ನಾನವನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಮಕ್ಕಳು ಅಥವಾ ವಯಸ್ಸಾದವರಿಗೆ ವೈರಲ್ ಜ್ವರ ಇದ್ದರೆ, ಸ್ನಾನ ಮಾಡುವಾಗ ಎಚ್ಚರಿಕೆ ವಹಿಸಬೇಕು. ಜ್ವರದ ಸಮಯದಲ್ಲಿ, ಕೆಲವರು ಶೀತದಿಂದ ಚಳಿ ಅನುಭವಿಸಬಹುದು. ಹಾಗಾಗಿ ವೈದ್ಯರ ಸಲಹೆ ಪಡೆದು ಸ್ನಾನ ಮಾಡುವುದು ಉತ್ತಮ. ದೇಹವು ವೈರಲ್ ಸೋಂಕುಗಳ ವಿರುದ್ಧ ಹೋರಾಡುವಂತೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸಬೇಕು.