ಬಾಗಲಕೋಟೆ:- ಬಿಜೆಪಿಯಲ್ಲಿ ಹಿರಿಯರ ಮಾತು ಕೇಳಿದ್ದೆ ತಪ್ಪಾಯ್ತಾ!? ಎಂದು ಮಾಜಿ ಸಚಿವ ಈಶ್ವರಪ್ಪ ಬೇಸರ ಹೊರ ಹಾಕಿದ್ದಾರೆ.
ಕಳೆದ ಬಾರಿ ರಾಯಣ್ಣ ಬ್ರಿಗೇಡ್ಗೆ ಹಿಂದುಳಿದವರು, ದಲಿತರು ಹಾಗೂ ಸಮಸ್ತ ಹಿಂದೂ ಸಮಾಜ ಬೆಂಬಲ ಕೊಟ್ಟಿತ್ತು. ಅಲ್ಲದೇ ಎಲ್ಲಾ ಪಕ್ಷದವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಇದನ್ನು ಸಹಿಸದ ಕೆಲವರು ಅಮಿತ್ ಶಾ ಅವರನ್ನು ಭೇಟಿಯಾಗಿ ನನ್ನ ಬಗ್ಗೆ ಹಾಗೂ ಈ ಕಾರ್ಯಕ್ರಮದ ಬಗ್ಗೆ ದೂರು ನೀಡಿದ್ದರು ಎಂದು ತಿಳಿಸಿದರು.
ಆಗ ಕೇಂದ್ರ ನಾಯಕರಾದ ಅಮಿತ್ ಶಾ ನನ್ನನ್ನು ಕರೆದು ರಾಯಣ್ಣ ಬ್ರಿಗೇಡ್ ಯಾಕೆ ಬೇಕು? ಇದೆಲ್ಲ ಬೇಡ ಅಂತ ನನಗೆ ಹೇಳಿದ್ರ. ಆದ್ರೆ ನಾನು ಯಾಕೆ ಬೇಡ ಅಂತ ಅವರ ಜೊತೆ ವಾದ ಮಾಡಿದೆ. ಆದರೆ ಅವರ ಬಳಿ ಇದಕ್ಕೆ ಉತ್ತರ ಸಿಗಲಿಲ್ಲ ಎಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.