ಬೆಂಗಳೂರು:– ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟ ಜೋರಾಗಿರುವ ಹಿನ್ನೆಲೆ, ಸೊಳ್ಳೆಗಳ ಸಂತತಿ ಹೆಚ್ಚಳವಾಗಿದೆ.
ಮಳೆ ನೀರು ಎಲ್ಲಡೆ ನುಗ್ಗಿ ಭಾರೀ ಅವಾಂತರಗಳನ್ನು ಸೃಷ್ಟಿಸಿದೆ.ಮತ್ತೊಂದೆಡೆ ರಾಜ ಕಾಲುವೆಯ ಕೊಚ್ಚೆ ನೀರು ಮನೆಗಳಿಗೆ ನುಗ್ಗಿರುವುದರಿಂದ ಸೊಳ್ಳೆಗಳ ಕಾಟ ಶುರುವಾಗಿದೆ. ಈ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಮತ್ತೆ ಏರಿಕೆಯ ಎಚ್ಚರಿಕೆಯನ್ನ ವೈದ್ಯರು ನೀಡಿದ್ದಾರೆ. ಹೀಗಾಗಿ ಮಳೆಯಿಂದ ಕೊಂಚ ಎಚ್ಚರ ವಹಿಸುವಂತೆ ರಜಧಾನಿಯ ಜನರಿಗೆ ಸಲಹೆ ನೀಡಿದ್ದಾರೆ.
ಇನ್ನು ಈಗಾಗಲೇ ಮೂರು ದಿನದಿಂದ ಶುರುಯುತ್ತಿರುವ ಮಳೆಯಿಂದ ನಗರದಲ್ಲಿ ಶೀತ, ಜ್ವರದ ಪ್ರಕರಣಗಳು ಕೂಡ ಹೆಚ್ಚಳಗೊಂಡಿದೆ. ಕುಡಿಯುವ ನೀರಿಗೆ ಕಲುಷಿತ ನೀರು ಮಿಕ್ಸ್ ಆಗಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ವೈರಲ್ ಫೀವರ್ ಹಾಗೂ ತಂಪಾದ ವಾತವರಣದಿಂದ ನಾನಾ ಆರೋಗ್ಯದ ಸಮಸ್ಯೆ ಕಂಡು ಬರುತ್ತಿವೆ. ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ವೈದ್ಯರ ಎಚ್ಚರಿಕೆಯಿಂದ ಸಿಲಿಕಾನ್ ಸಿಟಿ ಜನರಿಗೆ ಆತಂಕ ಶುರುವಾಗಿದೆ. ಒಂದು ಕಡೆ ಮಳೆಯಿಂದ ಜನರ ಜೀವನ ಬೀದಿಗೆ ಬಂದ್ರೆ ಮತ್ತೊಂದಡೆ ಮಳೆಯ ನಿರಂತರ ಎಫೆಕ್ಟ್ ಹಾಗೂ ಆರೋಗ್ಯದಲ್ಲಿ ಏರುಪೇರು ಶುರುವಾಗಿದೆ. ಮಳೆಯಿಂದ ಉಂಟಾದ ಜಲಾವೃತದಿಂದ ಕೊಳಚೆ ಚರಂಡಿ ನೀರಿನ ಹಾವಳಿಗೆ ಸೊಳ್ಳೆ ಕಾಟ ಶುರುವಾಗಿ ಕೆಮ್ಮು, ನೆಗಡಿ, ವೈರಲ್ ಫೀವರ್ ಜಾಸ್ತಿ ಆಗ್ತಿದೆ. ಹೀಗಾಗಿ ಆದಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ