ಹಾವೇರಿ :- ಚರಂಡಿಯಲ್ಲಿ ಬಿದ್ದು ಬಾಲಕ ಸಾವನ್ನಪ್ಪಿದ್ದು, ಇಬ್ಬರು ಅಧಿಕಾರಿಗಳು ಅಮಾನತು ಮಾಡಲಾಗಿದೆ.
ಜಗತ್ತಿನಲ್ಲಿ ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಕಷ್ಟ ನೆನೆದು ಶಾಸಕಿ ರೂಪಕಲಾ ಶಶಿಧರ್ ಭಾವುಕ!
ಕಿರಿಯ ಆರೋಗ್ಯ ನಿರೀಕ್ಷಕ ರಮೇಶ್ ಆರ್.ಮುಂಜೋಜಿ ಮತ್ತು ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ ಅವರನ್ನು ಅಮಾನತು ಮಾಡಿ ಡಾ.ವಿಜಯ್ ಮಹಾಂತೇಶ್ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.
ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಮೌಖಿಕ ಆದೇಶ ಹಿನ್ನೆಲೆ ಇಬ್ಬರು ಅಧಿಕಾರಿಗಳನ್ನು ಡಿಸಿ ಅಮಾನತು ಮಾಡಿದ್ದಾರೆ. ಚರಂಡಿ ಕಾಲುವೆಯ ಮೇಲಿನ ಕಲ್ಲು ಮುಚ್ಚದೇ ನಿರ್ಲಕ್ಷ್ಯ ವಹಿಸಲಾಗಿದ್ದು, ತೆರೆದ ಚರಂಡಿ ಕಾಲುವೆಗೆ ಬಿದ್ದು ನಿವೇದನ್ ಬಸವರಾಜ ಗುಡಗೇರಿ ಮೃತಪಟ್ಟಿದ್ದಾನೆ.
ಜಿಲ್ಲೆಯಲ್ಲಿ ಹಲವೆಡೆ ರಾತ್ರಿ ಧಾರಾಕಾರ ಮಳೆ ಸುರಿದೆ. ಈ ವೇಳೆ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ರಸ್ತೆ ಕಾಣದೆ ಚರಂಡಿಯಲ್ಲಿ 12 ವರ್ಷದ ಬಾಲಕ ನಿವೇದನ್ ಬಸವರಾಜ ಗುಡಗೇರಿ ಕೊಚ್ಚಿ ಹೋಗಿದ್ದ. ಬಳಿಕ ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಗಳಿಂದ ಚರಂಡಿಯಲ್ಲಿ ಬಾಲಕನ ಪತ್ತೆಗಾಗಿ ಶೋಧ ಕಾರ್ಯ ಮಾಡಿದ್ದರು ಎನ್ನಲಾಗಿದೆ.