ಕೆಜಿಎಫ್ – ಕೆಜಿಎಫ್ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ,ಕೆಜಿಎಫ್ ನಗರಸಭೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಗರಸಭೆ ಸಭಾಂಗಣದಲ್ಲಿ ಆದಿಕವಿ, ಮಹರ್ಷಿ ವಾಲ್ಮೀಕಿ ರವರ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್ ರವರು,
ಸಮುದಾಯ ಭವನ ಮತ್ತು ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಜಾಗ ನೀಡದಿದ್ದರೆ ಉಗ್ರ ಹೋರಾಟ!
ಪುರಾಣಗಳು ಹಾಗೂ ಈ ಆಧುನಿಕ ಯುಗದಲ್ಲಿಯೂ ಹೆಣ್ಣು ಮಕ್ಕಳು ಶೋಷಣೆಗೆ ಒಳಗಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದು ಶಾಸಕರು ಕಣ್ಣೀರಿಟ್ಟರು. ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಆದ ಒಂದು ಸ್ಥಾನಮಾನವಿದೆ ಆದರೆ ಹೆಣ್ಣನ್ನು ಕೀಳು ಭಾವನೆಯಿಂದ ನೋಡದೆ ಆಕೆಯನ್ನು ಗೌರವಿಸಬೇಕೆಂದರು. ವಾಲ್ಮೀಕಿ ರವರು ವಿಶ್ವಕ್ಕೆ ರಾಮಾಯಣ ಎಂಬ ಅತಿದೊಡ್ಡದಾದ ಕಾವ್ಯವನ್ನು ಕೊಡುಗೆ ನೀಡಿದ್ದಾರೆ.
ರಾಮಾಯಣದಲ್ಲಿ ಒಳಗೊಂಡಿರುವ ತತ್ವಾದರ್ಶ ಕೊಡುಗೆ ಅಪಾರವಾಗಿದ್ದು, ಅವರು ನೀಡಿರುವ ಆದರ್ಶ ವಿಚಾರ-ತತ್ವಾದಾರ್ಶಗಳು ನಮ್ಮ ದೇಶ ಮಾತ್ರವಲ್ಲದೇ ಬೇರೆ- ಬೇರೆ ದೇಶಗಳಲ್ಲಿ ಪ್ರಚಲಿತದಲ್ಲಿವೆ.ವಾಲ್ಮೀಕಿ ಅವರ ತತ್ವಗಳನ್ನು ಜೀವನದಲ್ಲಿ ಪಾಲನೆ ಮಾಡಬೇಕು ಎಂದರು.