ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಗೆ ಬಿಗ್ ಶಾಕ್ ಎದುರಾಗಿದ್ದು, ನಾಯಕತ್ವ ಸ್ಥಾನಕ್ಕೆ ಕುತ್ತು ಬಂದಿದೆ. ಈ ಬಾರಿ ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ವನಿತೆಯರು ಹೇಳುವಷ್ಟು ಪ್ರದರ್ಶನ ಕೊಟ್ಟಿಲ್ಲ.
ವಿಪರೀತ ಬೆನ್ನು ನೋವು: ಆರೋಪಿ ದರ್ಶನ್ ಗಾಗಿ ಬಂತು ಮೆಡಿಕಲ್ ಬೆಡ್, ದಿಂಬು!
ಪ್ರಬಲ ಸ್ಪರ್ಧಿ ಎನಿಸಿಕೊಡಿದ್ದ ಭಾರತ ವನಿತಾ ಪಡೆ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸಿತು.
ವಿಶ್ವಕಪ್ ಆರಂಭಕ್ಕೂ ಮುನ್ನವೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಟೀಂ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ನಮ್ಮ ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ಹೀಗಾಗಿ ನಾವು ಈ ಬಾರಿ ವಿಶ್ವಕಪ್ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿದ್ದೇವೆ ಎಂದಿದ್ದರು. ಆದರೆ ಇಡೀ ಟೂರ್ನಿಯಲ್ಲಿ ತಂಡದ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ತೀರ ಕಳಪೆಯಾಗಿತ್ತು.
ಇದಲ್ಲದೆ ನಾಯಕಿಯ ನಿರ್ಧಾರಗಳು ಸಾಕಷ್ಟು ಗೊಂದಲದಿಂದ ಕೂಡಿದ್ದವು. ಇದರ ಜೊತೆಗೆ ಒಬ್ಬ ಆಟಗಾರ್ತಿಯಾಗಿಯೂ ಹರ್ಮನ್ಪ್ರೀತ್ ಕೌರ್ ಅವರ ಪ್ರದರ್ಶನ ಅಷ್ಟಕಷ್ಟೆಯಾಗಿತ್ತು. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಹರ್ಮನ್ಪ್ರೀತ್ ಅವರ ಆಮೆಗತಿಯ ಇನ್ನಿಂಗ್ಸ್ ತಂಡದ ಸೋಲಿಗೆ ಪ್ರಮುಖ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವಂತದ್ದೆ.
ಇದೀಗ ಟಿ20 ವಿಶ್ವಕಪ್ನಿಂದ ಖಾಲಿ ಕೈಯಲ್ಲಿ ವಾಪಸ್ಸಾಗಿರುವ ಭಾರತ ಮಹಿಳಾ ತಂಡದ ನಾಯಕಿಯ ಬದಲಾವಣೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಂತೆ ಹರ್ಮನ್ಪ್ರೀತ್ ಕೌರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಮಾತುಕತೆ ಜೋರಾಗಿದೆ. ಅನುಭವಿ ಆಟಗಾರರು ಹಾಗೂ ಮಾಜಿ ಮಹಿಲಾ ಕ್ರಿಕೆಟರ್ಗಳು ಹರ್ಮನ್ಪ್ರೀತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಿಸಿಸಿಐ ಕೂಡ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಹರ್ಮನ್ಪ್ರೀತ್ ನಾಯಕತ್ವದಿಂದ ಕೆಳಗಿಳಿದರೆ ಅವರ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಎಂಬುದು ಸದ್ಯಕ್ಕೆ ಹುಟ್ಟಿಕೊಂಡಿರುವ ಪ್ರಶ್ನೆಯಾಗಿದೆ. ಸದ್ಯಕ್ಕೆ ಕೇಳಿಬಂದಿರುವ ಮಾಹಿತಿ ಪ್ರಕಾರ ತಂಡದ ನಾಯಕತ್ವಕ್ಕೆ ಇಬ್ಬರು ಆಟಗಾರ್ತಿಯರ ನಡುವೆ ಪೈಪೋಟಿ ಏರ್ಪಟ್ಟಿದೆ.
ಪ್ರಸ್ತುತ ತಂಡದ ಉಪನಾಯಕಿಯಾಗಿರುವ ಸ್ಮೃತಿ ಮಂಧಾನ ಅವರಿಗೆ ನಾಯಕತ್ವ ಸಿಗಬಹುದು ಎಂದು ಹೇಳಲಾಗುತ್ತಿದೆ. ಸ್ಮೃತಿ ಮಂಧಾನ ಅಲ್ಲದೆ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಜೆಮಿಮಾ ರಾಡ್ರಿಗಸ್ ಅವರು ನಾಯಕತ್ವದ ರೇಸ್ನಲ್ಲಿದ್ದಾರೆ.