ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಗಾಗಿ ಜೈಲಿಗೆ ಮೆಡಿಕಲ್ ಬೆಡ್, ದಿಂಬು ಎಲ್ಲಾ ಬಂದಿದೆ.
BJP MLA ಬಸನಗೌಡ ಯತ್ನಾಳ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿದ ಕೋರ್ಟ್!
ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್ ಅವರು ದಿನದಿಂದ ದಿನಕ್ಕೆ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ.
ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರನ್ನು ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಪರೀಕ್ಷೆ ಮಾಡಿದ್ದರು. ನಿನ್ನೆ ಜೈಲಾಧಿಕಾರಿಗಳಿಗೆ ಮೆಡಿಕಲ್ ವರದಿ ಸಲ್ಲಿಕೆಯಾಗಿದೆ. ಈ ಮೆಡಿಕಲ್ ರಿಪೋರ್ಟ್ನ ಮೇಲಾಧಿಕಾರಿಗಳೊಂದಿಗೆ ಜೈಲಾಧಿಕಾರಿಗಳು ಚರ್ಚೆ ಮಾಡಿದ್ದರು.
ದರ್ಶನ್ ಅವರ ತಪಾಸಣೆ ನಡೆಸಿದ ವಿಮ್ಸ್ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಅವರು ಬೆಡ್ & ದಿಂಬು ನೀಡುವಂತೆ ವರದಿಯಲ್ಲಿ ಉಲ್ಲೇಖ ಮಾಡಿದ್ದರು. ದರ್ಶನ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಿಂದ ಬೆಡ್ & ದಿಂಬು ರವಾನೆ ಮಾಡಲಾಗಿದೆ.
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ಬೆಡ್ & ದಿಂಬ ಅನ್ನು ತರಲಾಯಿತು. ಪರಿಶೀಲನೆ ನಡೆಸಿದ ಪೊಲೀಸರು ದರ್ಶನ್ ಇರುವ ಬ್ಯಾರೆಕ್ಗೆ ಶಿಫ್ಟ್ ಮಾಡಿದ್ದಾರೆ.