ಸಾಮಾನ್ಯವಾಗಿ ಜನರ ಕೈಬೆರಳುಗಳ ಉಗುರುಗಳು ಬೇರೆ ಬೇರೆ ರೀತಿಯದ್ದಾಗಿರುತ್ತವೆ, ಎಂದರೆ ಕೆಲವರ ಬೆರಳುಗಳ ಉಗುರುಗಳು ಉದ್ದವಾಗಿದ್ದರೆ, ಇನ್ನೂ ಕೆಲವರದ್ದು ದುಂಡಗೆ ಇರುತ್ತವೆ. ಈಗೇಕೆ ಇದರ ಬಗ್ಗೆ ಮಾತು ಅಂತೀರಾ? ನಿಮ್ಮ ಉಗುರಿನ ಆಕಾರವು ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳ ಬಗ್ಗೆ ಹೇಳುವ ಸಾಮರ್ಥ್ಯವನ್ನು ಹೊಂದಿರುತ್ತದೆ ಅಂತ ಹೇಳಿದರೆ ನೀವು ಬಹುಶಃ ನಂಬಲಿಕ್ಕಿಲ್ಲ. ಆದರೆ ಇದು ಸತ್ಯ ಅಂತೆ ನೋಡಿ.. ಇದು ಸಂಪೂರ್ಣವಾಗಿ ನಿಜವಲ್ಲದಿರಬಹುದು, ಆದರೆ ನೀವು ಉಗುರಿನ ಆಕಾರವನ್ನು ಗಮನದಲ್ಲಿಟ್ಟುಕೊಂಡು ಅನೇಕ ಗುಣಲಕ್ಷಣಗಳಲ್ಲಿ ಸಾಮ್ಯತೆಯನ್ನು ಕಾಣಬಹುದು.
ರೇಣುಕಾಸ್ವಾಮಿ ಕೊಲೆ ಪ್ರಕರಣ: ತುರ್ತು ಜಾಮೀನು ಅರ್ಜಿ ವಿಚಾರಣೆಗೆ ಹೈಕೋರ್ಟ್ ಗೆ ದರ್ಶನ್ ಮನವಿ!
ಉಗುರುಗಳು ಕೈಗಳ ಅಂದ ಹೆಚ್ಚಿಸುವುದು ಮಾತ್ರವಲ್ಲ, ಅವುಗಳಲ್ಲಿ ಆರೋಗ್ಯದ ಗುಟ್ಟು ಕೂಡ ಅಡಗಿದೆ. ಉಗುರುಗಳ ಬಣ್ಣ-ಆಕಾರದಲ್ಲಿ ಏನಾದರೂ ಬದಲಾವಣೆ ಕಂಡುಬಂದರೆ ನಿರ್ಲಕ್ಷ್ಯ ಮಾಡದಿರಿ. ಅವು ನಿಮಗೆ ಆರೋಗ್ಯ ಸಮಸ್ಯೆಗಳನ್ನು ತೋರಿಸುತ್ತವೆ.
ಉಗುರುಗಳು ಯಾವ ಯಾವ ರೀತಿ ತಮ್ಮ ಸ್ವರೂಪ ಬದಲಿಸಿದರೆ ಅಥವಾ ಬಣ್ಣ ಬದಲಿಸಿದರೆ ನಿಮಗೆ ಯಾವ ತರಹದ ಆರೋಗ್ಯ ಸಮಸ್ಯೆಗಳು ಇರುತ್ತವೆ ಎಂಬುದನ್ನು ತಿಳಿಸಿ ಕೊಡಲಾಗಿದೆ. ನಿಮಗೆ ಅಥವಾ ನಿಮ್ಮ ಪರಿಚಯಸ್ತರಿಗೆ ಯಾರಿಗಾದರೂ ಈ ರೀತಿ ಇದ್ದರೆ ನೀವು ಸುಲಭವಾಗಿ ಅವರ ಸಮಸ್ಯೆಯನ್ನು ಪತ್ತೆ ಹಚ್ಚಬಹುದು.
ಉಗುರಿನ ಆಕಾರ:- ಉಗುರು ತುದಿಯ ಭಾಗ ಒಂದು ವೇಳೆ ವಿರುದ್ಧ ದಿಕ್ಕಿನಲ್ಲಿ ತಿರುಗಿದ್ದರೆ ಅದು ಕಬ್ಬಿಣದ ಅಂಶದ ಕೊರತೆಯಿಂದ ಉಂಟಾದ ಅನಿಮಿಯಾ ಎನ್ನಬಹುದು. ಒಂದು ವೇಳೆ ಉಗುರುಗಳ ತುದಿಯ ಭಾಗ ಒಳಭಾಗಕ್ಕೆ ತಿರುಗಿಕೊಂಡಿದ್ದರೆ, ಅದು ಉಸಿರಾಟದ ತೊಂದರೆ ಅಥವಾ ಹೃದಯದ ಸಮಸ್ಯೆಯನ್ನು ಸೂಚಿಸುತ್ತದೆ. ನೋಡಲು ಉಗುರುಗಳು ಚೌಕಕಾರದಲ್ಲಿ ಕಂಡು ಬಂದು ಅಗಲವಾಗಿದ್ದರೆ, ಅದು ದೇಹದಲ್ಲಿ ಹಾರ್ಮೋನ್ ಅವ್ಯವಸ್ಥೆ ಎಂದು ಹೇಳಬಹುದು. ತೆಳ್ಳಗಿನ ಉಗರು ಒಂದು ವೇಳೆ ನಿಮಗಿದ್ದರೆ ಅದು ನಿಮಗೆ ವಿಟಮಿನ್ ಬಿ12 ಕೊರತೆ ಆಗಿರುತ್ತದೆ.
ಮಾಂಸಾಹಾರ, ಡೈರಿ ಮತ್ತು ಕೋಳಿ ಮೊಟ್ಟೆಗಳು ವಿಟಮಿನ್ ಬಿ12 ಅಂಶವನ್ನು ಹೆಚ್ಚಾಗಿ ಹೊಂದಿರುತ್ತವೆ. ಹಸಿರು ಎಲೆ ತರಕಾರಿಗಳು ಮತ್ತು ಒಣ ಬೀಜಗಳು ತಮ್ಮಲ್ಲಿ ಕಬ್ಬಿಣದ ಅಂಶದ ಪ್ರಮಾಣವನ್ನು ಹೆಚ್ಚು ಹೊಂದಿರುತ್ತವೆ. ಸಿಟ್ರಸ್ ಹಣ್ಣುಗಳು ಅಥವಾ ನಿಂಬೆ ಹಣ್ಣಿನ ರಸ ಆಗಾಗ ಸೇವನೆ ಮಾಡುತ್ತಿದ್ದರೆ, ನಾವು ತಿನ್ನುವ ಆಹಾರದಲ್ಲಿ ಕಬ್ಬಿಣದ ಅಂಶವನ್ನು ಚೆನ್ನಾಗಿ ಹೀರಿಕೊಂಡು ನಮಗೆ ತಲುಪಿಸುತ್ತದೆ.
ಉಗುರು ಸುಲಿಯುವುದು:-
ನಮ್ಮ ಉಗುರುಗಳು ಶೈನಿಂಗ್ ಹೊಂದಿರುತ್ತವೆ. ಅದಕ್ಕೆ ಪ್ರಮುಖ ಕಾರಣ ಎಂದರೆ ಕೆರಾಟಿನ್. ಅತಿಯಾದ ಬಿಸಿ, ತಂಪು, ನೀರು, ಗಾಳಿ ಇವುಗಳಿಗೆ ಒಡ್ಡಿಕೊಂಡಾಗ ಉಗುರು ಸುಲಿಯುತ್ತದೆ.
ಇದಕ್ಕೆ ಪ್ರಮುಖ ಕಾರಣ ಎಂದರೆ ಒಮೆಗಾ 3 ಫ್ಯಾಟಿ ಆಮ್ಲದ ಕೊರತೆ. ನಿಮ್ಮ ಆಹಾರ ಪದ್ಧತಿಯಲ್ಲಿ ವಾಲ್ನಟ್, ಸೂರ್ಯಕಾಂತಿ ಬೀಜಗಳು, ಬಾದಾಮಿ ಇವುಗಳನ್ನು ಸೇರಿಸಿಕೊಂಡರೆ ದೇಹದಲ್ಲಿ ತೇವಾಂಶದ ಪ್ರಮಾಣ ನಿರ್ವಹಣೆಯಾಗುತ್ತದೆ.
ಹಳದಿ ಬಣ್ಣದ ಉಗುರುಗಳು:-
ಉಗುರಿನ ಬಣ್ಣ ಬದಲಾದರೆ ಅದು ದೇಹದ ಒಳಗಿನ ಅಂಗಾಂಗಗಳ ಸಮಸ್ಯೆಯನ್ನು ಸೂಚಿಸುತ್ತದೆ. ಉಗುರಿನ ಬಣ್ಣ ಒಂದು ವೇಳೆ ಹಳದಿ ಬಣ್ಣಕ್ಕೆ ತಿರುಗಿದರೆ ಅದು ಮಧುಮೇಹ, ಉಸಿರಾಟದ ತೊಂದರೆ ಅಥವಾ ಲಿವರ್ ಸಮಸ್ಯೆಯನ್ನು ಸೂಚಿಸುತ್ತದೆ. ಉಗುರಿನ ಮೇಲ್ಭಾಗದಲ್ಲಿ ಒಂದು ವೇಳೆ ಹಳದಿ ಚುಕ್ಕಿಗಳು ಕಂಡು ಬಂದರೆ ಅದು ಫಂಗಸ್ ಅಥವಾ ಸೋರಿಯಾಸಿಸ್ ಆಗಿರಬಹುದು ಎಂಬುದರ ಸೂಚಕ
ಫ್ಲೆಕ್ಸಿಬಿಲಿಟಿ ಇಲ್ಲದ ಉಗುರುಗಳು:-
ತುಂಬಾ ಜನರು ತಮ್ಮ ಉಗುರುಗಳ ಬಗ್ಗೆ ಈ ಕಂಪ್ಲೇಂಟ್ ಹೇಳುತ್ತಾರೆ. ಇದಕ್ಕೆ ಕಾರಣ ಎಂದರೆ ಅವರ ಉಗುರುಗಳಲ್ಲಿ ತೇವಾಂಶ ಇಲ್ಲದೆ ಇರುವುದು, ಬೇಗ ಒಣಗುವುದು ಮತ್ತು ಉಗುರುಗಳು ಸೀಳು ಬಿಡುವುದು
ಥೈರಾಯಿಡ್ ಹಾರ್ಮೋನ್ ದೇಹದಲ್ಲಿ ಕಡಿಮೆ ಬಿಡುಗಡೆಯಾದರೆ ಈ ರೀತಿ ಆಗುತ್ತದೆ. ಇದರ ಜೊತೆಗೆ ನಿಮ್ಮ ಆಹಾರ ಪದ್ಧತಿಯಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಕಡಿಮೆ ಇದ್ದರೆ ಕೂಡ ಇದೇ ರೀತಿ ಉಗುರುಗಳು ದುರ್ಬಲಗೊಳ್ಳುತ್ತವೆ. ಹೀಗಾಗಿ ಕಬ್ಬಿಣದ ಅಂಶ ಹೆಚ್ಚಾಗಿರುವ ಮೆಂತ್ಯ, ಹಸಿರು ಎಲೆ ತರಕಾರಿಗಳು, ನಾಚಿನಿ, ಮೀನು ಇವುಗಳನ್ನು ಹೆಚ್ಚಾಗಿ ಸೇವಿಸಬೇಕು
ಉಗುರುಗಳ ಮೇಲೆ ಬಿಳಿ ಚುಕ್ಕೆಗಳು:
ಕೆಲವರಿಗೆ ಉಗುರುಗಳ ಮೇಲೆ ಬಿಳಿ ಬಣ್ಣದ ಗೆರೆಗಳು ಹಾಗೂ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಇದು ಜ್ವರ ಬಂದಿರುವ, ಲಿವರ್ ಸಮಸ್ಯೆ ಹಾಗೂ ಹೃದಯದ ಕಾಯಿಲೆ ಇರುವ ಸೂಚನೆಯನ್ನು ಕೊಡುತ್ತದೆ.
ಕೆಲವರಿಗೆ ಕಿಡ್ನಿ ಸಮಸ್ಯೆ ಅಥವಾ ಕಬ್ಬಿಣದ ಹಾಗೂ ಜಿಂಕ್ ಅಂಶದ ಕೊರತೆಯನ್ನು ಇದು ಹೇಳುತ್ತದೆ. ಹೀಗಾಗಿ ತಮ್ಮ ಆಹಾರ ಪದ್ಧತಿಯಲ್ಲಿ ಒಣ ಬೀನ್ಸ್, ಡೈರಿ ಉತ್ಪನ್ನಗಳು, ಚಿಕನ್ ಬ್ರೆಸ್ಟ್, ಒಣ ದ್ರಾಕ್ಷಿ, ಬಟಾಣಿ, ಓಟ್ ಮೀಲ್ ಇತ್ಯಾದಿಗಳನ್ನು ಸೇರಿಸಿಕೊಳ್ಳಿ.