ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ ಪ್ರಾಬಲ್ಯ ಮುಂದುವರಿದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ 15 ಕಾರುಗಳಲ್ಲಿ ಮಾರುತಿ ಕಂಪನಿಯದ್ದೇ ಹೆಚ್ಚು. ಮಾರುತಿ ಎರ್ಟಿಗಾ ಸೆಪ್ಟೆಂಬರ್ ನಲ್ಲಿ ಅತಿಹೆಚ್ಚು ಮಾರಾಟವಾದ ಕಾರಾಗಿದೆ.
ಸೆಪ್ಟೆಂಬರ್ ನಲ್ಲಿ 17,441 ಎರ್ಟಿಗಾ ಕಾರುಗಳ ಮಾರಾಟವಾಗಿದೆ. ಮಾರುತಿ ಸುಜುಕಿಯ ಸ್ವಿಫ್ಟ್ ಕಾರುಗಳು 16,241 ಯೂನಿಟ್ ಮಾರಾಟವಾಗಿವೆ.
ಭಾರತದಲ್ಲಿ ಮಾರುತಿ ಬಿಟ್ಟರೆ ಟಾಟಾ, ಹ್ಯುಂಡೈ ಮತ್ತು ಮಹೀಂದ್ರ ಕಾರುಗಳು ಹೆಚ್ಚು ಮಾರಾಟ ಕಂಡಿವೆ. ಟಾಪ್-15 ಕಾರುಗಳಲ್ಲಿ ಮಾರುತಿ ಸುಜುಕಿಯ 9 ಕಾರುಗಳಿವೆ. ಟಾಟಾ ಮತ್ತು ಹ್ಯುಂಡೈನ ಎರಡೆರಡು ಕಾರುಗಳಿವೆ. ಮಹೀಂದ್ರ ಮತ್ತು ಕಿಯಾದ ತಲಾ ಒಂದೊಂದು ಕಾರು ಈ ಪಟ್ಟಿಯಲ್ಲಿವೆ.
KPTCL Recruitment: ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: KPTCL ನಿಂದ 2975 ಹುದ್ದೆಗಳಿಗೆ ಅರ್ಜಿ ಆಹ್ವಾನ!
ಟಾಪ್ 15 ಪಟ್ಟಿಯಲ್ಲಿ ಮಾರುತಿ ಸುಜುಕಿಯ 9 ಮಾಡಲ್ ಗಳು ಸೇರಿವೆ.
2024ರ ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು
- ಮಾರುತಿ ಎರ್ಟಿಗಾ: 17,441 ಕಾರು ಮಾರಾಟ
- ಮಾರುತಿ ಸ್ವಿಫ್ಟ್: 16,241
- ಹ್ಯುಂಡೈ ಕ್ರೆಟಾ: 15,902
- ಮಾರುತಿ ಬ್ರೆಜ್ಜಾ: 15,322
- ಮಹೀಂದ್ರ ಸ್ಕಾರ್ಪಿಯೋ: 14,438
- ಮಾರುತಿ ಬಲೇನೋ: 14,292
- ಮಾರುತಿ ಫ್ರಾಂಕ್ಸ್: 13,874
- ಟಾಟಾ ಪಂಚ್: 13,711
- ಮಾರುತಿ ವ್ಯಾಗನ್ ಆರ್: 13,339
- ಮಾರುತಿ ಈಕೋ: 11,908
- ಟಾಟಾ ನೆಕ್ಸನ್: 11,470
- ಮಾರುತಿ ಡಿಜೈರ್: 10,853
- ಕಿಯಾ ಸೋನೆಟ್: 10,335
- ಮಾರುತಿ ಗ್ರ್ಯಾಂಡ್ ವಿಟಾರ: 10,267
- ಹ್ಯುಂಡೈ ವೆನ್ಯೂ: 10,259