ಬೆಂಗಳೂರು: ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರೀಗೌಡ ರಾಜೀನಾಮೆ ವಿಚಾರ ಸಂಬಂಧಿಸಿದಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಯಾವುದೇ ತಪ್ಪುಗಳಾಗಿಲ್ಲ, ಕಾನೂನು ಉಲ್ಲಂಘನೆ ಯಾಗಿಲ್ಲ ಅಂದವರು ಸೈಟ್ ವಾಪಸ್ಸು ಕೊಟ್ಟರು ಮುಡಾ ಅವ್ಯವಹಾರ ತನಿಖೆ ನಡೆಯುವ ಸಂದರ್ಭದಲ್ಲಿ ನಾನು ತಪ್ಪು ಮಾಡಿಲ್ಲ ರಾಜೀನಾಮೆ ಕೊಡಲ್ಲ ಅಂತಿದ್ರು ಸಿದ್ದರಾಮಯ್ಯ
ಇವಾಗ ಮುಡಾ ಅಧ್ಯಕ್ಷ ರಿಂದ ರಾಜೀನಾಮೆ ಕೊಡಿಸಿದ್ದಾರೆ ಇದರ ಅರ್ಥ ಅಲ್ಲಿ ಅವ್ಯವಹಾರ ಆಗಿದೆ, ಇದರ ಜವಬ್ದಾರಿ ಇವ್ರು ಹೊರಬೇಕು ಅಂತಾ ತಾನೇ ಇದರ ಪ್ರಸಂಗ ಮರೀಗೌಡ ರಾಜೀನಾಮೆ ಕೊಡಿಸಿರೋದು ಎಂದ ಬೊಮ್ಮಾಯಿ