ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ಶಾಸಕ ಮುನಿರತ್ನ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಇಂದು ಬಿಡುಗಡೆಯಾದರು.
20 ಕ್ಕೂ ಹೆಚ್ಚು ದಿನಗಳಿಂದ ಜೈಲಿನಲ್ಲಿದ್ದ ಶಾಸಕರು ಬುಧವಾರ ಬಿಡುಗಡೆಯಾಗಿ, ಜೈಲಿನಿಂದ ನೇರವಾಗಿ ತಮ್ಮ ನಿವಾಸದ ಕಡೆ ತೆರಳಿದರು.
ಜಾಮೀನು ಸಿಕ್ಕಿದ ಹಿನ್ನೆಲೆ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡಗುಡೆ ಆಗಿದ್ದಾರೆ. ನಿನ್ನೆ ಜೈಲಧಿಕಾರಿಗಳಿಗೆ ಜಾಮೀನು ಪ್ರತಿ ತಡವಾಗಿ ತಲುಪಿತ್ತು. ಹೀಗಾಗಿ ನಿನ್ನೆ ಬಿಡುಗಡೆ ಆಗಿರಲಿಲ್ಲ.
ಇಂದು ಬಿಡುಗಡೆಯಾಗುತ್ತಿದ್ದಂತೆ ಕಾರಿನಲ್ಲಿ ತಮ್ಮ ಮನೆಗೆ ಶಾಸಕ ಮುನಿರತ್ನ ತೆರಳಿದ್ದಾರೆ. ಸದ್ಯ ಮುನಿರತ್ನ ಬಿಡುಗಡೆ ಹಿನ್ನಲೆ ವೈಯಾಲಿಕಾವಲ್ ನಿವಾಸದ ಬಳಿ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ.