ಕಲಬುರಗಿ: ಚೆಕ್ ಡ್ಯಾಂ ಗೆ ಕ್ರಿಮಿ ನಾಶಕ ಔಷಧಿ ಸೇರ್ಪಡೆಯಾದ ಹಿನ್ನಲೆ ನೂರಾರು ಮೀನುಗಳ ಮಾರಣ ಹೋಮವಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಚಿಂಚೋಳಿ ತಾಲೂಕಿನ ಬೋನಸಪುರದಲ್ಲಿ ಘಟನೆ ನಡೆದಿದ್ದು ಒಟ್ಟು ಎರಡು ಚೆಕ್ ಡ್ಯಾಂಗಳಲ್ಲಿನ ಮೀನುಗಳು ಸಾವನ್ನಪ್ಪಿವೆ.
ಕ್ರಿಮಿನಾಶಕ ಔಷಧಿ ಸೇರ್ಪಡೆ ಹಿನ್ನಲೆ ನೀರು ಕೆಂಪು ಬಣ್ಣಕ್ಕೆ ತಿರುಗಿದೆ.ಬೇಕು ಅಂತಾನೇ ಕಿಡಿಗೇಡಿಗಳು ನೀರಿಗೆ ರಾಸಾಯನಿಕ ಕ್ರಿಮಿ ನಾಶಕ ಸೇರ್ಪಡೆ ಮಾಡಿರುವ ಶಂಕೆ ವ್ಯಕ್ತವಾಗಿದೆ..ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ಚಿಂಚೋಳಿ ಆರೋಗ್ಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.