ಚಾಮರಾಜನಗರ:- ಕರ್ನಾಟಕದಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಅದರಂತೆ ನಿನ್ನೆ ಸಂಜೆಯಿಂದ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಮನೆಯ ಗೋಡೆಯೊಂದು ಕುಸಿತಗೊಂಡಿದೆ.
ನಿಷ್ಠೆಗೆ ಇನ್ನೊಂದು ಹೆಸರೇ RCB ಅಭಿಮಾನಿಗಳು: ಹಾಡಿ ಹೊಗಳಿದ ಅಶ್ವಿನ್!
ಈ ಘಟನೆ ಜಿಲ್ಲೆಯ ಬೇಗೂರು ಹೊನ್ನೂರು ತೆಳ್ಳನೂರು ಗ್ರಾಮದಲ್ಲಿ ಜರುಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜಿಲ್ಲೆಯ ಸಂತೆಮರಹಳ್ಳಿ ಸಮೀಪದ ತೆಳ್ಳನೂರು ನಿವಾಸಿ ಸುಬ್ಬಮ್ಮ ಎನ್ನುವರರ ಮನೆ ಇದಾಗಿದ್ದು, ಘಟನೆಯಿಂದ ಮನೆಯಲ್ಲಿದ್ದ ವಿವಿಧ ಪಿಠೋಪಕರಣಗಳು ಹಾನಿಯಾಗಿದೆ.
ಘಟನೆ ಪರಿಣಾಮ ಸಂತ್ರಸ್ತೆ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ಲದೇ ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.