ಬೆಂಗಳೂರು:- ಮೆಟ್ರೋ ಪ್ರಯಾಣಿಕರು ಇದು ನೋಡಲೇಬೇಕಾದ ಸ್ಟೋರಿ. ನಗರದ ಈ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ಇಂದು ವ್ಯತ್ಯಯ ಉಂಟಾಗಲಿದೆ.
ಅಡುಗೆ ಮನೆ ಯಾವ ದಿಕ್ಕಿನಲ್ಲಿ ಇರಬೇಕು!? ಕಿಚನ್ ವಾಸ್ತು ಟಿಪ್ಸ್ ನೀವು ತಿಳಿಯಲೇಬೇಕು!?
ನಗರದಲ್ಲಿ ಮೆಟ್ರೋ ಟ್ರ್ಯಾಕ್ ಮೇಲೆ ಮರ ಬಿದ್ದ ಹಿನ್ನೆಲೆ, ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ. ಬೆಳಿಗ್ಗೆ 6.15 ರ ಸುಮಾರಿಗೆ ನೇರಳೆ ಮಾರ್ಗದ ಎಸ್ವಿ ರಸ್ತೆ ಮತ್ತು ಇಂದಿರಾನಗರ ನಡುವೆ ಹಳಿಯ ಮೇಲೆ ಒಂದು ಮರ ಬಿದ್ದಿದೆ. ಪರಿಣಾಮವಾಗಿ ಮೆಟ್ರೋ ಸಂಚಾರಕ್ಕೆ ತಾತ್ಕಾಲಿಕವಾಗಿ ಅಡ್ಡಿಯಾಗಿದೆ.
ಸದ್ಯ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್, ಎಂ ಜಿ ರಸ್ತೆ ಟು ಚಲ್ಲಘಟ್ಟ ನಡುವೆ ಮಾತ್ರ ರೈಲುಗಳು ಸಂಚಾರ ಮಾಡುತ್ತಿವೆ. ಮರ ತೆರವು ಕಾರ್ಯಾಚರಣೆ ಮುಂದುವರಿದಿದೆ. ಈ ಬಗ್ಗೆ ಎಕ್ಸ್ ಮಾಡಿರುವ ಬಿಎಂಆರ್ಸಿಎಲ್, ಇಂದು ಬೆಳಿಗ್ಗೆ 6.15 ಗಂಟೆ ಸುಮಾರಿಗೆ ನೇರಳೆ ಮಾರ್ಗದಲ್ಲಿನ ಎಸ್ವಿ ರಸ್ತೆ ಮತ್ತು ಇಂದಿರಾನಗರ ನಡುವೆ ಹಳಿಯ ಮೇಲೆ ಒಂದು ಮರ ಬಿದ್ದ ಕಾರಣ ಕಾರ್ಯಾಚರಣೆ ತಾತ್ಕಾಲಿಕವಾಗಿ ಅಡ್ಡಿಯಾಗಿದೆ.
ಈ ಸಮಯದಲ್ಲಿ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಮತ್ತು ವೈಟ್ ಫೀಲ್ಡ್ ಹಾಗೂ ಎಂ ಜಿ ರಸ್ತೆ ಮತ್ತು ಚಲ್ಲಘಟ್ಟ ನಡುವೆ ಮಾತ್ರ ರೈಲುಗಳು ಓಡುತ್ತಿವೆ, ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರಯಾಣಿಕರಿಗೆ ಇದರಿಂದಾಗಿರುವ ಅನಾನುಕೂಲತೆಗಾಗಿ ವಿಷಾದಿಸಲಾಗಿದೆ ಎಂದು ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಆಧಿಕಾರಿ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.