ವಿಜಯಪುರ:- ಆ ಜಮೀರ್ ತಾಕತ್ತಿದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ವಕ್ಫ್ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿ ಭಾಗವಹಿಸಿ ಮಾತಾಡಿದ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜಿಲ್ಲೆಯಲ್ಲಿ ವಕ್ಫ್ ಮಂಡಳಿಗೆ ಸೇರಿದ ಜಮೀನು 11,000 ಎಕರೆ ಇದೆ ಎಂದಿರುವ ಸಚಿವ ಜಮೀರ್ ಅಹ್ಮದ್ರನ್ನು ತರಾಟೆಗೆ ತೆಗೆದುಕೊಂಡರು.
ಮುಂದಿನ ಸಲ ವಿಜಯಪುರದಿಂದ ಮುಸಲ್ಮಾನ ಶಾಸಕ ಅಂತ ಹೇಳಿರುವ ಜಮೀರ್ ಅವರು ತಾಕತ್ತಿದ್ದರೆ ತಾನೇ ಬಂದು ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ಯತ್ನಾಳ್ ಸವಾಲ್ ಹಾಕಿದ್ದಾರೆ.