ಪಾಟ್ನಾ:- ಸೆಪ್ಟಿಕ್ ಟ್ಯಾಂಕ್ನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ಜರುಗಿದೆ.
ನಿಲ್ಲದ ಮಳೆ ಆರ್ಭಟ: ಬೆಂಗಳೂರಿನಲ್ಲಿ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!
ಇಬ್ಬರು ಸಹೋದರರು ಮತ್ತು ಸೋದರಳಿಯ ಹಾಗೂ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಅದೇ ಕುಟುಂಬದ ವ್ಯಕ್ತಿಯ ಸಾವಿನ ನಂತರ ಕುಟುಂಬದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.
ಸೆಪ್ಟಿಕ್ ಟ್ಯಾಂಕ್ನಲ್ಲಿ ಉಸಿರುಗಟ್ಟಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಇದರಲ್ಲಿ ಮೊದಲಿಗೆ ವ್ಯಕ್ತಿಯೊಬ್ಬ ಪೈಪ್ ಅಳವಡಿಸಲು ಮುಂದಾದಾಗ ಸೆಪ್ಟಿಕ್ ಟ್ಯಾಂಕ್ ಒಳಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಇಬ್ಬರು ಸಹೋದರರು ಮತ್ತು ಅವರ ಸೋದರಳಿಯ ಸಹ ಟ್ಯಾಂಕ್ಗೆ ಇಳಿದರು. ಆತನನ್ನು ರಕ್ಷಿಸಲು ಹೋದ ಮೂವರೂ ಒಳಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಸಂಜಯ್ ರಾಮ್ ಎಂಬ ವ್ಯಕ್ತಿ ಶೌಚಾಲಯದ ತೊಟ್ಟಿಗೆ ಪೈಪ್ ಹಾಕಲು ಪ್ರಯತ್ನಿಸುತ್ತಿದ್ದ. ಈ ವೇಳೆ ಸೆಪ್ಟಿಕ್ ಟ್ಯಾಂಕ್ನ ಮುಚ್ಚಳ ಒಡೆದಿದೆ. ಮುಚ್ಚಳ ಒಡೆದ ಕಾರಣ ಆತ ಟ್ಯಾಂಕ್ ಒಳಗೆ ಬಿದ್ದಿದ್ದಾನೆ. ಅವರನ್ನು ರಕ್ಷಿಸಲು ನೆರೆಹೊರೆಯಲ್ಲಿ ವಾಸಿಸುವ ಸುಶೀಲ್ ರಾಮ್ ಟ್ಯಾಂಕ್ ಒಳಗೆ ಇಳಿದಿದ್ದಾನೆ. ಅವರಿಬ್ಬರೂ ಹೊರಗೆ ಬರದಿದ್ದಾಗ ಸುಶೀಲ್ ಅವರ ಸಹೋದರ ಸುಧೀರ್ ರಾಮ್ ಮುಂದೆ ಬಂದಿದ್ದು, ಅವರನ್ನು ರಕ್ಷಿಸಲು ಆತ ಕೂಡ ಸೆಪ್ಟಿಕ್ ಟ್ಯಾಂಕ್ಗೆ ಇಳಿದಿದ್ದಾರೆ. ಇದಾದ ನಂತರ ಅವರ ಸೋದರಳಿಯ ನವಲ್ ರಾಮ್ ಕೂಡ ಕೆಳಗಿಳಿದಿದ್ದಾರೆ.
ಈ ವೇಳೆ ಅವಘಡ ಸಂಭವಿಸಿದೆ.