ಶಿವಮೊಗ್ಗ: ಸಿದ್ದರಾಮಯ್ಯ ಇತ್ತೀಚಿಗೆ ದೇವಸ್ಥಾನಕ್ಕೆ ಹೋಗಿ ಕುಂಕುಮ ಹಚ್ಚಿಕೊಳ್ಳುತ್ತಿದ್ದಾರೆ. ಮೊದಲು ಕುಂಕುಮ ಹಚ್ಚಲು ಹೋದರೆ ಮೈಮೇಲೆ ದೆವ್ವ ಬಂದ ರೀತಿ ಆಡೋರು ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈ ವೇಳೆ, ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ದೇವಾಲಯಗಳಿಗೆ ಭೇಟಿ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಡಾ ಹಗರಣದಲ್ಲಿ ಸಿಲುಕಿದ ಸಿಎಂಗೆ ಚಾಮುಂಡೇಶ್ವರಿ, ಸವದತ್ತಿ ಎಲ್ಲಮ್ಮ ರಕ್ಷಣೆ ಕೊಡಬೇಕಾ? ಮುಸ್ಲಿಮರು, ಗೂಂಡಾಗಳ ಪರ ಇದ್ದರೆ ಚಾಮುಂಡೇಶ್ವರಿ ಹಾಗೂ ಎಲ್ಲಮ್ಮ ಹೇಗೆ ಕಾಪಾಡುತ್ತಾರೆ? ಚಾಮುಂಡೇಶ್ವರಿ ಮಹಿಷಾಸುರನ ಸಂಹಾರ ಮಾಡಿದ ರೀತಿ ನೀವು ಸಂಹಾರ ಆಗ್ತೀರಾ ಎಂದು ಕಿಡಿಕಾರಿದ್ದಾರೆ.
ಭಾರತೀಯ ಆಹಾರ ನಿಗಮದಲ್ಲಿದೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹ 71,000 ಸಂಬಳ – ಇಂದೇ ಅರ್ಜಿ ಸಲ್ಲಿಸಿ
ಜಾತಿ ಜನಗಣತಿ ಅ.18ಕ್ಕೆ ಮಂಡಿಸುತ್ತೇನೆ ಎಂದಿದ್ದರು. ಇದೀಗ 18ಕ್ಕೆ ಆಗಲ್ಲ ಮುಂದೂಡುತ್ತೇನೆ ಎಂದಿದ್ದಾರೆ. 9 ವರ್ಷದ ಹಿಂದೆಯೇ ಜಾತಿಜನಗಣತಿ ಮಂಡಿಸುತ್ತೇನೆ ಎಂದಿದ್ದರು. 9 ವರ್ಷ ಆದರೂ ಮಂಡಿಸಲು ಆಗಿಲ್ಲ. ಇದೀಗ ಅ.25ಕ್ಕೆ ಮಂಡನೆ ಮಾಡ್ತೀನಿ ಎಂದಿದ್ದಾರೆ. ನೋಡೋಣ 9 ವರ್ಷ ಕಾಯ್ದಿದ್ದೇವೆ. ಇನ್ನೊಂದು ವಾರ ಕಾಯೋದಕ್ಕೆ ಆಗಲ್ವಾ ಎಂದು ಹೇಳಿದ್ದಾರೆ.